ಸ್ನಾನ ಮಾಡುವ ವೇಳೆ ಸರಿಯಾದ ಕಾಳಜಿ ವಹಿಸಿದರೆ ನಿಮ್ಮ ತ್ವಚೆ ಸದಾ ಆರೋಗ್ಯಕರವಾಗಿರುತ್ತದೆ.
ಬೇಸಿಗೆಯಲ್ಲಿ ಚರ್ಮದ ಮೇಲೆ ರ‍್ಯಾಶಸ್ ಅಥವಾ ಗುಳ್ಳೆಗಳು ಏಳುತ್ತವೆ. ಈ ವೇಳೆ ಸಾಬೂನಿನಿಂದ ಸ್ನಾನ ಮಾಡುವ ಬದಲು ಮುಲ್ತಾನಿ ಮಿಟ್ಟಿಯಿಂದ ಸ್ನಾನ ಮಾಡಿ.
ಬಹಳ ಸುಸ್ತಾಗಿದ್ದರೆ, ಮಾಂಸ ಖಂಡಗಳಲ್ಲಿ ನೋವು ಇದ್ದರೆ ಸ್ನಾನ ಮಾಡುವ ನೀರಿಗೆ ಸ್ಪಟಿಕ ಅಥವಾ ಕಲ್ಲು ಉಪ್ಪು ಹಾಕಿ.
ತ್ವಚೆಯ ಕಾಂತಿ ಕಾಪಾಡಲು ಸಾಬೂನು ಫೇಸ್ ವಾಶ್ ಬಳಸುವ ಬದಲು ಕಡಲೆ ಹಿಟ್ಟನ್ನು ಬಳಸಿ.
ಸೋಂಕಿನಿಂದ ತ್ವಚೆಯನ್ನು ರಕ್ಸಿಸಲು ಒಂದು ಬೌಲ್ ನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಈ ನೀರನ್ನು ಸ್ನಾನದ ನೀರಿಗೆ ಹಾಕಿ .
ತ್ವಚೆಯನ್ನು ಕ್ಲೀನ್ ಮಾಡಲು ಸ್ನಾನದ ನೀರಿಗೆ 4 ರಿಂದ 5 ಗ್ರೀನ್ ಟೀ ಬ್ಯಾಗ್ ಗಳನ್ನೂ ಹಾಕಿ 20 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಈ ನೀರಿನಿಂದ ಸ್ನಾನ ಮಾಡಿ.
skin ಟೋನ್ ಅನ್ನು ಉತ್ತಮಗೊಳಿಸಬೇಕಾದರೆ ಸ್ನಾನ ಮಾಡುವಾಗ ಚಂದನ ಬಳಸಬೇಕು.
ಇದಲ್ಲದೆ ತ್ವಚೆಯನ್ನು ಆರೋಗ್ಯವಾಗಿಡ ಬೇಕಾದರೆ ಶರೀರವನ್ನು ಹೈಡ್ರೇಡ್ ಆಗಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
ಅಗತ್ಯಕ್ಕೆ ಅನುಗುಣವಾಗಿ ಈ ವಸ್ತುಗಳನ್ನು ಸ್ನಾನ ಮಾಡುವ ವೇಳೆ ಬಳಸಿದರೆ ಸುಂದರ ತ್ವಚೆ ನಿಮ್ಮದಾಗುವುದು.