ಸಿದ್ಧಾರ್ಥ್ ಮಲ್ಹೋತ್ರಾ ಆಧುನಿಕ ಯುಗದ ಹ್ಯಾಂಡ್’ಸಂ ಹಂಕ್ ಎಂದೇ ಹೇಳಬಹುದು. ಈ ನಟ ಇತ್ತೀಚೆಗೆ ತಮ್ಮ ಪ್ರೇಯಸಿ ನಟಿ ಕಿಯಾರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರೂ ಸಹ ಮದ್ಯ ಸೇವನೆ ಮಾಡುವುದಿಲ್ಲವಂತೆ.
ಪರಿಣಿತಿ ಚೋಪ್ರಾ ಬಾಲಿವುಡ್ ಇಂಡಸ್ಟ್ರಿಯ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ತನ್ನ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮತ್ತು ಫಿಟ್ ಆಗಿರಲು ಮದ್ಯ ಸೇವನೆ ತ್ಯಜಿಸಿದ್ದಾರೆ.
ಸೋನು ಸೂದ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ಅತ್ಯಂತ ಪ್ರೀತಿಯ ಖಳನಾಯಕರಲ್ಲಿ ಒಬ್ಬರು ಎಂದು ಹೇಳಬಹುದು. ಇವರು ಕೂಡ ಆಹಾರದ ಬಗ್ಗೆ ತುಂಬಾ ಜಾಗರೂಕರಾಗಿರುತ್ತಾರೆ. ಆದ್ದರಿಂದ ಆಲ್ಕೋಹಾಲ್ ತ್ಯಜಿಸಿದ್ದಾರಂತೆ.
ದೀಪಿಕಾ ಪಡುಕೋಣೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ಅತ್ಯಂತ ಪ್ರೀತಿಪಾತ್ರ ನಟಿ. ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಫಿಟ್ ಆಗಿರಲು, ದೀಪಿಕಾ ಮದ್ಯಪಾನದಿಂದ ದೂರ ಉಳಿದಿದ್ದಾರೆ.
ಜಾನ್ ಅಬ್ರಹಾಂ ಬಾಲಿವುಡ್ ರಂಗದ ಸುಂದರ ಹೀರೋ. ಇವರು ಕೂಡ ಫಿಟ್ನೆಸ್ ಕಾಯ್ದುಕೊಳ್ಳುವ ಕಾರಣದಿಂದ ಮದ್ಯಪಾನದಿಂದ ದೂರ ಉಳಿದಿದ್ದಾರೆ.
ಸೋನಾಕ್ಷಿ ಸಿನ್ಹಾ ಬಾಲಿವುಡ್ ಇಂಡಸ್ಟ್ರಿಯ ಬ್ಯೂಟಿಫುಲ್ ಹೀರೋಯಿನ್. ಜಂಕ್ ಫುಡ್’ಗಳಿಂದ ಹಿಡಿದು ಮದ್ಯಪಾನದವರೆಗೆ ಯಾವುದನ್ನು ಸೇವಿಸುವುದಿಲ್ಲ.
ಅಮಿತಾಬ್ ಬಚ್ಚನ್ ಬಾಲಿವುಡ್ನ ಲೆಜೆಂಡರಿ ಎವರ್ಗ್ರೀನ್ ನಟ. ಸಿನಿಮಾಗಳಲ್ಲಿ ಮಾತ್ರ ಮದ್ಯ ಸೇವಿಸುವಂತೆ ನಟಿಸುವ ಇವರು ನಿಜ ಜೀವನದಲ್ಲಿ ಮದ್ಯಪಾನ, ಧೂಮಪಾನದಿಂದ ದೂರವಿರುತ್ತಾರೆ.
ಶಿಲ್ಪಾ ಶೆಟ್ಟಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಖತ್ ಫಿಟ್ನೆಸ್ ನಿರ್ವಹಣೆ ಮಾಡುತ್ತಾ ಇಂದಿಗೂ ಯಂಗ್ ಆಗಿ ಕಾಣುತ್ತಿರುವ ನಟಿ. ಯೋಗ ಮಾಡುವ ಕಾರಣ ತನ್ನ ಆರೋಗ್ಯ ಕಾಪಾಡಲು ಮದ್ಯಪಾನದಿಂದ ದೂರವಿರುತ್ತಾರೆ
ಅಭಿಷೇಕ್ ಬಚ್ಚನ್ ಬಾಲಿವುಡ್ ಇಂಡಸ್ಟ್ರಿಯ ಪ್ರಸಿದ್ಧ ನಟ. ತಂದೆಯಂತೆ ಮಗ ಕೂಡ ಮದ್ಯಪಾನ ಮಾಡುವುದಿಲ್ಲ.
ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಕೂಡ ಆಹಾರ ಮತ್ತು ಫಿಟ್ನೆಸ್ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಎಂದಿಗೂ ಮದ್ಯಪಾನ ಮಾಡಿಲ್ಲ ಎಂದು ಹೇಳಿದ್ದಾರೆ.