ದಾಳಿಂಬೆ ಆರೋಗ್ಯಕ್ಕೆ ತುಂಬಾ ಉಪಯುಕ್ತ. ರಕ್ತದ ಕೊರತೆಯಿಂದ ಹಿಡಿದು ಆರೋಗ್ಯದವರೆಗೆ ಅನೇಕ ವಿಷಯಗಳಲ್ಲಿ ಇದು ಸಹಾಯಕ. ಆದರೆ ಅದಕ್ಕಿಂತ ಬೆಸ್ಟ್ ದಾಳಿಂಬೆ ಎಲೆ.
ಕೆಮ್ಮು, ಶೀತ ಮತ್ತು ಜ್ವರಕ್ಕೆ ದಾಳಿಂಬೆ ಎಲೆಗಳು ತುಂಬಾ ಪ್ರಯೋಜನಕಾರಿ. ಎಲೆಗಳನ್ನ ನೀರಿನಲ್ಲಿ ಕುದಿಸಿ ಕುಡಿದರೆ ಈ ಎಲ್ಲಾ ಸಮಸ್ಯೆಗಳು ವಾಸಿಯಾಗುತ್ತವೆ.
ದಾಳಿಂಬೆ ಎಲೆಗಳು ಚರ್ಮಕ್ಕೆ ಪ್ರಯೋಜನಕಾರಿ. ಚರ್ಮನ್ನು ದದ್ದುಗಳಿಂದ ರಕ್ಷಿಸುತ್ತದೆ ಜೊತೆಗೆ ತ್ವಚೆಗೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಗುಣಪಡಿಸುತ್ತದೆ.
ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ದಾಳಿಂಬೆ ಎಲೆಯು ತುಂಬಾ ಸಹಾಯಕವಾಗಿದೆ. ಹೊಟ್ಟೆನೋವಿಗೂ ಇವು ಪ್ರಯೋಜನಕಾರಿ. ದಾಳಿಂಬೆ ಎಲೆಗಳಲ್ಲಿ ಪೋಷಕಾಂಶಗಳಿದ್ದು ಅಜೀರ್ಣ ಮತ್ತು ಭೇದಿ ಸಮಸ್ಯೆಗಳ ನಿವಾರಣೆಗೆ ಸಹಕಾರಿ.
ದಾಳಿಂಬೆ ಎಲೆಗಳ ಪೇಸ್ಟ್ ಅನ್ನು ಹಚ್ಚಿದರೆ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮೊಡವೆಗಳನ್ನು ಸಹ ಹೋಗಲಾಡಿಸಬಹುದು.
ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.