ಬೇವಿನ ಎಲೆಯು ರುಚಿಯಲ್ಲಿ ಕಹಿಯಾಗಿದ್ದೂ,ಆಯುರ್ವೇದದ ಚಿಕಿತ್ಸೆಗಳಲ್ಲಿ ಬೇವಿನ ಎಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.ಮರದ ಪ್ರತಿಯೊಂದು ಭಾಗವು ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
ಶಾಂಪೂ ಬಳಕೆಯ ನಂತರ ಬೇಯಿಸಿದ ಬೇವಿನ ಎಲೆಯ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಕೂದಲಿನಲ್ಲಿರುವ ಶಿಲೀಂಧ್ರಗಳನ್ನು ಸಾಯಿಸಲು ಸಹಾಯ ಮಾಡುತ್ತದೆ.
ಬೇವಿನ ಎಲೆಯನ್ನು ನಿರಂತರವಾಗಿ ಸೇವಿಸುವುದರಿಂದ ಮುಖದ ಮೇಲಿರುವ ಕಲೆಗಳನ್ನು ತೆಗೆದು ಹಾಕುವುದಲ್ಲದೇ ನಿಮ್ಮ ತ್ವಚೆಯ ಅಂದತ್ವವನ್ನು ಹೆಚ್ಚಿಸಿಕೊಳ್ಳಬಹುದು.
ಬೇವಿನ ಎಲೆಗಳನ್ನು ತಿನ್ನುವುದರಿಂದ ದೇಹವು ಸದಾ ಸ್ವಚ್ಚವಾಗಿರುವಂತೆ ನೋಡಿಕೊಳ್ಳುತ್ತದೆ.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೇವಿನ ಎಲೆಗಳಿಂದ ಕಷಾಯವನ್ನು ತಯಾರಿಸಿ ಸೇವಿಸಿದರೆ ದೇಹದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.ಕೆಟ್ಟ ಕೊಲೆಸ್ಟ್ರಾಲ್ ಅನ್ನು ಮಟ್ಟ ಹಾಕುತ್ತದೆ.
ಸಿಹಿತಿಂಡಿಗಳನ್ನು ಸೇವನೆ ಮಾಡಿದ್ದರಿಂದ ನಿಮಗೆ ಹುಳಕಲ್ಲಿನ ಸಮಸ್ಯೆ ಇದ್ದಲ್ಲಿ ಬೇವಿನ ಎಲೆಗಳನ್ನು ಆಗಾಗಾ ಜಗಿಯುವುದರಿಂದ ನಿಮ್ಮ ಹಲ್ಲುಗಳನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬಹುದು.
ಬೇವಿನ ಎಣ್ಣೆಯನ್ನು ನಿಮ್ಮ ಕೀಲುಗಳ ನೋವಿಗೆ ಮಸಾಜ್ ರೂಪದಲ್ಲಿ ಹಚ್ಚಿಕೊಳ್ಳುವುದರಿಂದ ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ.
ದಿನನಿತ್ಯ ಬೇವಿನ ಎಲೆಯನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುತ್ತದೆ.ಉತ್ತಮವಾದ ಜೀರ್ಣಕ್ರಿಯೆಯನ್ನು ಹೊಂದಬಹುದು.