ಎಳನೀರು ಮಾತ್ರವಲ್ಲ, ಅದರ ಗಂಜಿ ಕೂಡಾ ಅಮೃತಾ

ಎಳ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ಬೇಸಿಗೆಯಲ್ಲಿ ಇದು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಎಳನೀರು ಗಂಜಿ ಕೂಡಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಎಳನೀರು ಗಂಜಿಯಲ್ಲಿರುವ ನಾರಿನಾಂಶ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.

ಎಳನೀರು ಗಂಜಿಯಲ್ಲಿ ಅನೇಕ ಪೋಷಕಾಂಶಗಳು ಮತ್ತು ಉತ್ಕರ್ಶಕ ನಿರೋಧಕ ಗುಣ ಲಕ್ಷಣಗಳು ಕಂಡು ಬರುತ್ತವೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಎಳನೀರು ಗಂಜಿ ದೀರ್ಘ ಕಾಲದವರೆಗೆ ಹೊಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಬೇಗನೆ ಹಸಿವಾಗುವುದಿಲ್ಲ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಎಳನೀರು ಗಂಜಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಿ ಹೃದಯದ ಆರೋಗ್ಯ ಕಾಪಾಡುತ್ತದೆ.

ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಫೈಬರ್ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮವನ್ನು ಮೃದುವಾಗಿ ಇರಿಸಲು ಸಹಾಯ ಮಾಡುತ್ತದೆ.

ಬೇಸಿಗೆಯಲ್ಲಿ ಎಳನೀರು ಮತ್ತು ಗಂಜಿ ಎರಡನ್ನೂ ಸೇವಿಸಬೇಕು. ಇದು ಹೊಟ್ಟೆಯನ್ನು ತಂಪಾಗಿರಿಸುತ್ತದೆ.

ಎಳನೀರು ಗಂಜಿ ದೇಹಕ್ಕೆ ತುಂಬಾ ಪ್ರಯೋಜನಕಾರಿ.

VIEW ALL

Read Next Story