ಪ್ರಾಚೀನ ಕಾಲದಲ್ಲಿ ಆರೋಗ್ಯದ ದೃಷ್ಟಿಯಿಂದ ಬಳಕೆ ಮಾಡುತ್ತಿದ್ದ ಬೆಳ್ಳಿ ಪಾತ್ರೆಗಳು, ಕಾಲ ಕಳೆದಂತೆ ಶ್ರೀಮಂತರ ಮನೆ ಸೇರಿದೆ. ದುಡ್ಡಿದ್ದರೆ ಬೆಳ್ಳಿ ಲೋಟ, ತಟ್ಟೆಯಲ್ಲಿ ಆಹಾರ, ಇಲ್ಲದಿದ್ದರೆ ಸಾಮಾನ್ಯ ಪಾತ್ರೆಯಲ್ಲಿ ಊಟ ಮಾಡುವ ಪರಿಸ್ಥಿತಿ ಈಗಿನದು.
ಆದರೆ ಬೆಳ್ಳಿಯ ಪಾತ್ರೆಯಲ್ಲಿ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ. ಆಯುರ್ವೇದ ಮಾತ್ರವಲ್ಲ, ವಿಜ್ಞಾನಿಗಳು ಬೆಳ್ಳಿ ಪಾತ್ರೆಗಳಲ್ಲಿ ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ.
ನಾವಿಂದು ಬೆಳ್ಳಿಯ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಅಥವಾ ಆಹಾರ ಸೇವಿಸುವುದರಿಂದ ಸಿಗುವ ಉತ್ತಮ ಪ್ರಯೋಜನಗಳನ್ನು ತಿಳಿಸಿಕೊಡಲಿದ್ದೇವೆ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆಳ್ಳಿ ಪಾತ್ರೆಗಳು 100% ಬ್ಯಾಕ್ಟೀರಿಯಾ ಮುಕ್ತವಾಗಿರುತ್ತವೆ, ಆದ್ದರಿಂದ ಈ ಪಾತ್ರೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಸ್ವಚ್ಛಗೊಳಿಸುವ ಅಗತ್ಯವಿಲ್ಲ, ಸರಳ ನೀರಿನಿಂದ ಅವುಗಳನ್ನು ಸ್ವಚ್ಛಗೊಳಿಸಿದರೆ ಸಾಕು. ಅಷ್ಟೇ ಅಲ್ಲ, ಈ ಲೋಟದಲ್ಲಿ ನೀರು ಕುಡಿಯುವುದರಿಂದ ಸೋಂಕು ಹರಡುವ ಅಪಾಯವಿಲ್ಲ.
ಬೆಳ್ಳಿಯ ವಸ್ತುಗಳಲ್ಲಿ ಆಹಾರ ಸೇವಿಸಿದರೆ ಅಥವಾ ನೀರು ಕುಡಿದರೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದರಿಂದ ಶೀತ ಮತ್ತು ಜ್ವರದ ಸಮಸ್ಯೆ ನಿವಾರಣೆಯಾಗುತ್ತದೆ. ಜೊತೆಗೆ ಪಿತ್ತರಸ ಹೆಚ್ಚಳ ಸಮಸ್ಯೆಯನ್ನು ತೆಗೆದುಹಾಕುವಲ್ಲಿ ಇದರ ಬಳಕೆಯು ಬಹಳ ಪರಿಣಾಮಕಾರಿಯಾಗಿದೆ.
ಬೆಳ್ಳಿಯ ದೊಡ್ಡ ಪ್ರಯೋಜನವೆಂದರೆ ಅದು ದೇಹದ ಉಷ್ಣತೆಯನ್ನು ನಿಯಂತ್ರಿಸಿ, ತಂಪಾಗಿಸಿರುತ್ತದೆ.
ಬೆಳ್ಳಿ ಲೋಟದಲ್ಲಿ ನೀರು ಕುಡಿದರೆ ರಕ್ತದ ಕೊರತೆಯನ್ನು ನೀಗಿಸುತ್ತದೆ. ಇದರೊಂದಿಗೆ ಆಯಾಸ, ಜೀರ್ಣಕ್ರಿಯೆ ಸಮಸ್ಯೆಗಳೂ ದೂರವಾಗುತ್ತವೆ.
ಬೆಳ್ಳಿಯ ಪಾತ್ರೆಯಲ್ಲಿ ಪ್ರತಿದಿನ ನೀರು ಕುಡಿಯುವುದರಿಂದ ಮನಸ್ಸನ್ನು ಶಾಂತವಾಗಿಡಬಹುದು. ಇದು ನಿಮ್ಮನ್ನು ಒತ್ತಡದಿಂದ ದೂರವಿಡುತ್ತದೆ. ಇದರೊಂದಿಗೆ, ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
ದೇಹದ ಆಂತರಿಕ ಶುದ್ಧೀಕರಣಕ್ಕೆ ಬೆಳ್ಳಿಯ ನೀರು ತುಂಬಾ ಪ್ರಯೋಜನಕಾರಿ. ಇದು ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)