ಬಿಪಿ, ಶುಗರ್ ಎರಡನ್ನೂ ನಿಯಂತ್ರಿಸುತ್ತೆ ಸದಾಪುಷ್ಪ ಹೂವು: ಹೇಗೆ ಗೊತ್ತಾ?

ಸದಾಪುಷ್ಪ

ಸದಾಪುಷ್ಪ ಹೂವುಗಳು ರಸ್ತೆಬದಿ ಮತ್ತು ಮನೆಗಳಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಈ ಹೂವುಗಳಲ್ಲಿ ಹಲವು ವಿಧಗಳಿವೆ. ಇವುಗಳನ್ನು ಹೆಚ್ಚಾಗಿ ಪೂಜೆಗೆ ಬಳಸುತ್ತಾರೆ. ಆದರೆ ಈ ಹೂವುಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ನಿಮಗೆ ತಿಳಿದಿದೆಯೇ?

ಆಯುರ್ವೇದ

ಆಯುರ್ವೇದದಲ್ಲಿ, ಸದಾಪುಷ್ಪ ಹೂವನ್ನು ಅನೇಕ ಸಮಸ್ಯೆಗಳನ್ನು ತಡೆಗಟ್ಟಲು ಬಳಸಲಾಗುತ್ತದೆ. ಇದನ್ನು ನಿತ್ಯ ಬಳಸಿದರೆ ದೀರ್ಘಕಾಲದ ಕಾಯಿಲೆಗಳಾದ ಶುಗರ್, ಬಿಪಿ, ಕ್ಯಾನ್ಸರ್, ಪಿರಿಯಡ್ ಸಮಸ್ಯೆಗಳೂ ನಿಯಂತ್ರಣಕ್ಕೆ ಬರುತ್ತವೆ.

ಮಧುಮೇಹ

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹ ನಿಯಂತ್ರಣಕ್ಕೆ ಸದಾಪುಷ್ಪ ಹೂವನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರು, ಹಾಲು ಅಥವಾ ಹಣ್ಣಿನ ರಸದೊಂದಿಗೆ ಬೆರೆಸಿ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಸಕ್ಕರೆ ಮಟ್ಟ

ಸದಾಪುಷ್ಪ ಗಿಡದ ಮೂರು ಎಲೆಗಳನ್ನು ಪ್ರತಿದಿನ ಅಗಿಯುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಲ್ಲದೆ, ತಾಜಾ ಹೂವುಗಳನ್ನು ರಾತ್ರಿ ನೀರಿನಲ್ಲಿ ಸೇರಿಸಿ, ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಅಧಿಕ ಬಿಪಿ

ಸದಾಪುಷ್ಪ ಎಲೆಯಿಂದಲೂ ಅಧಿಕ ಬಿಪಿಯನ್ನು ನಿಯಂತ್ರಿಸಬಹುದು. ಪ್ರತಿದಿನ 5 ತಾಜಾ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಪುಡಿಮಾಡಿ ರಸ ಹೊರತೆಗೆಯಿರಿ. ಈ ರಸವನ್ನು ಎರಡು ಅಥವಾ ಮೂರು ಲೀಟರ್ ನೀರಿಗೆ ಬೆರೆಸಿ ಸೇವಿಸಿದರೆ ಬಿಪಿ ನಿಯಂತ್ರಣಕ್ಕೆ ಬರುತ್ತದೆ.

ಪಿರಿಯಡ್ಸ್

ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಸಮಸ್ಯೆ ಇರುತ್ತದೆ. ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗಿಲ್ಲವಾದರೆ ಈ ಹೂವುಗಳಿಂದ ತಯಾರಿಸಿದ ಕಷಾಯ ಕುಡಿಯಿರಿ. ಸದಾಪುಷ್ಪ ಹೂವನ್ನು ನೀರಿಗೆ ಹಾಕಿ ಕುದಿಸಿ ಕುಡಿದರೆ ಸಾಕು.

ಸೂಚನೆ

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story