ಮಾವಿನ ಹಣ್ಣಿನಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಪ್ರಯೋಜನ

ಕ್ಯಾನ್ಸರ್ ನಿಯಂತ್ರಣ

ಮಾವಿನಹಣ್ಣಿನಲ್ಲಿರುವ ಬೀಟಾ-ಕ್ಯಾರೋಟಿನ್‌ ಒಂದು ಉತ್ಕರ್ಷಣ ನಿರೋಧಕವಾಗಿದ್ದು ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುವ ಮೂಲಕ ಕ್ಯಾನ್ಸರ್ ಅನ್ನು ನಿಯಂತ್ರಿಸುತ್ತದೆ.

ಹೃದ್ರೋಗ

ಮಾವಿನ ಹಣ್ಣಿನಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ ಹೃದಯರಕ್ತನಾಳದ ವ್ಯವಸ್ಥೆಯನ್ನು ಬೆಂಬಲಿಸಿ ಹೃದ್ರೋಗಗಳಿಂದ ದೂರ ಉಳಿಯುವಂತೆ ಮಾಡುತ್ತದೆ.

ಜೀರ್ಣಕ್ರಿಯೆ

ಮಾವಿನಲ್ಲಿ ಅಮೈಲೇಸ್ ಸಂಯುಕ್ತಗಳು ಮತ್ತು ಆಹಾರದ ಫೈಬರ್ ಎರಡೂ ಕಂಡುಬರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ಥಿರಗೊಳಿಸುವಲ್ಲಿ ಪ್ರಯೋಜನಕಾರಿ.

ತೂಕನಷ್ಟ

ಮಾವಿನ ಹಣ್ಣಿನಲ್ಲಿ ಫೈಬರ್ ಹೆಚ್ಚಾಗಿ ಕಂಡು ಬರುವುದರಿಂದ ಇದು ದೀರ್ಘ ಸಮಯದವರೆಗೆ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ತೂಕ ಇಳಿಕೆಯನ್ನೂ ಪ್ರಚೋದಿಸುತ್ತದೆ.

ಚರ್ಮದ ಆರೋಗ್ಯ

ವಿಟಮಿನ್ ಸಿ, ಬೀಟಾ-ಕ್ಯಾರೋಟಿನ್‌, ಉತ್ಕರ್ಷಣ ನಿರೋಧಕವನ್ನು ಹೇರಳವಾಗಿ ಹೊಂದಿರುವ ಮಾವಿನ ಹಣ್ಣು ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಲು ಪ್ರಯೋಜನಕಾರಿ.

ಮೆದುಳು

ವಿಟಮಿನ್ ಬಿ6, ಸಿ,ಫೋಲೇಟ್, ಗ್ಲುಟಾಮಿಬ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿರುವ ಮಾವಿನ ಹಣ್ಣು ಮೆದುಳನ್ನು ತೀಕ್ಷ್ಣಗೊಳಿಸುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story