ಪ್ರೋಟಿನ್, ಕಾರ್ಬೋ ಹೈಡ್ರೇಟ್, ಐರನ್, ಫೈಬರ್, ವಿಟಮಿನ್ ಸಿ, ಆಂಟಿ ಡಯಾಬಿಟಿಕ್, ಆಂಟಿ ಆಕ್ಸಿಡೆಂಟ್, ಮುಂತಾದ ಗುಣಗಳಿಂದ ಕುಂಬಳಕಾಯಿ ಸಮೃದ್ದವಾಗಿದೆ.
ಕುಂಬಳಕಾಯಿಯಲ್ಲಿ ಫೈಬರ್ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕುಂಬಳಕಾಯಿಯಲ್ಲಿ ಬೀಟಾ ಕೆರಟಿನ್ ಜೊತೆಗೆ ವಿಟಮಿನ್ ಎ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ.
ಕುಂಬಳಕಾಯಿಯಲ್ಲಿ ಕ್ಯಾಲ್ಷಿಯಂ ಇರುತ್ತದೆ. ಇದು ಮೂಳೆಗಳ ಆರೋಗ್ಯವನ್ನು ವೃದ್ದಿಸುತ್ತದೆ.
ಕುಂಬಳಕಾಯಿಯಲ್ಲಿ ಪೊಟ್ಯಾಷಿಯಂ ಕೂಡಾ ಹೇರಳವಾಗಿ ಕಂಡು ಬರುತ್ತದೆ. ಇದು ಬಿಪಿಯನ್ನು ನಾರ್ಮಲ್ ಆಗಿ ಇಡಲು ಸಹಾಯ ಮಾಡುತ್ತದೆ.
ಕುಂಬಳಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟ್ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳುತ್ತದೆ.
ಆಂಟಿ ಆಕ್ಸಿಡೆಂಟ್ ಬೀಟಾ ಕೆರಟಿನ್, ವಿಟಮಿನ್ ಸಿ ಮತ್ತು ಇನ್ನೂ ಅನೇಕ ಅಂಶಗಳು ಅಡಗಿರುತ್ತವೆ. ಇದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.
ಕುಂಬಳಕಾಯಿಯಲ್ಲಿರುವ ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.