ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು.. ಏರುಪೇರಾಗೋದಿಲ್ಲ ಬ್ಲಡ್‌ ಶುಗರ್‌ !

Chetana Devarmani
Oct 18,2024

ಸೇಬು ಹಣ್ಣು

ಸೇಬು ಹಣ್ಣು ಕರಗುವ ಫೈಬರ್‌, ವಿಟಮಿನ್ ಸಿ ಉತ್ತಮ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಪೇರಳೆ

ಪೇರಳೆಗಳ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ ಮತ್ತು ಕಡಿಮೆ GI ಮೌಲ್ಯವನ್ನು ಹೊಂದಿರುತ್ತವೆ. ಇದನ್ನು ಮಧುಮೇಹಿಗಳು ಚಿಂತೆಯಿಲ್ಲದೆಯೇ ತಿನ್ನಬಹುದಾಗಿದೆ.

ಏಪ್ರಿಕಾಟ್‌

ಏಪ್ರಿಕಾಟ್‌ಗಳು ಪೊಟ್ಯಾಸಿಯಮ್, ರಂಜಕ ಮತ್ತು ಇತರ ಖನಿಜಗಳ ಉತ್ತಮ ಮೂಲವಾಗಿದೆ.

ಚೆರ್ರಿ

ಚೆರ್ರಿ ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಆವಕಾಡೊ

ಆವಕಾಡೊ ಕಡಿಮೆ ಕಾರ್ಬ್ಸ್ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿವೆ. ಇದನ್ನು ಸೇವಿಸುವುದು ತೂಕ ಇಳಿಕೆ ಮತ್ತು ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಸಹಕಾರಿ.

ಸ್ಟ್ರಾಬೆರಿ

ಸ್ಟ್ರಾಬೆರಿ ಸಿಹಿ ಮತ್ತು ರುಚಿಕರ ಹಣ್ಣು. ಸ್ಟ್ರಾಬೆರಿಗಳಲ್ಲಿ ಸಕ್ಕರೆ ಅಂಶ ಕಡಿಮೆ. ಹೀಗಾಗಿ ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಸಹಕಾರಿ.

ಕಲ್ಲಂಗಡಿ

ಕಲ್ಲಂಗಡಿಗಳು ಬೇಸಿಗೆಯ ಸೀಸನಲ್‌ ಹಣ್ಣುಗಳಾಗಿವೆ. ಅವು ಸಹಿಯಾಗಿದ್ದರೂ ರಕ್ತದಲ್ಲಿನ ಸಕ್ಕರೆಮಟ್ಟವನ್ನು ಏರುಪೇರಾಗಿಸುವುದಿಲ್ಲ.

ರಾಸ್ಬೆರ್ರಿ

ರಾಸ್ಬೆರ್ರಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದನ್ನು ಸೇವಿಸುವುದು ತೂಕ ಇಳಿಕೆ ಮತ್ತು ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಸಹಕಾರಿ.

ಸೂಚನೆ

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.

VIEW ALL

Read Next Story