ಬೇವಿನ ಎಣ್ಣೆ ಚರ್ಮಕ್ಕೆ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇವುಗಳಲ್ಲಿರುವ ಪೋಷಕಾಂಶಗಳು ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿದೆ.
ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚುವುದರಿಂದ ಕೂದಲು ಉದುರುವುದು, ಹೇರ್ ಡ್ಯಾಮೇಜ್ ಆಗುವುದು ಮುಂತಾದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಹೊಕ್ಕಳಿಗೆ ಬೇವಿನ ಎಣ್ಣೆ ಹಾಕುವುದರಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.ಮುಖದ ಮೇಲಿರುವ ಮೊಡವೆ ಸಮಸ್ಯೆ ಪರಿಹಾರವಾಗುತ್ತದೆ.
ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚುವುದರಿಂದ ಆರೋಗ್ಯ ಸಮಸ್ಯೆಗಳು ಪರಿಹಾರವಾಗುವುದು. ಈ ಸಮಸ್ಯೆಗಳಲ್ಲಿ ತೂಕ ಹೆಚ್ಚಳ ಕೂಡಾ ಒಂದು. ತೂಕ ಹೆಚ್ಚಳವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.
ಜೀರ್ಣಕಾರಿ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ. ನಿಯಮಿತವಾಗಿ ಹೊಕ್ಕಳಿಗೆ ಬೇವಿನ ಎಣ್ಣೆ ಹಾಕುವುದರಿಂದ ಜೀರ್ಣಕಾರಿ ವ್ಯವಸ್ಥೆ ಸುಧಾರಿಸುತ್ತದೆ.
ರಾತ್ರಿ ಹೆಚ್ಚು ತಿನ್ನುವುದರಿಂದ ಬ್ಲೋಟಿಂಗ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾದಾಗ ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.
ರಕ್ತ ಪರಿಚಲನೆಯನ್ನು ಸುಧಾರಿಸಲು ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಬೇವಿನ ಎಣ್ಣೆಯನ್ನು ಹಚ್ಚಬೇಕು.
ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚುವುದರಿಂದ ಮಂಡಿ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ