ಹಲ್ಲುಗಳನ್ನು ಮುತ್ತಿನಂತೆ ಹೊಳೆಯುವಂತೆ ಮಾಡಲು ಈ ಮೂರು ವಸ್ತುಗಳನ್ನು ಬಳಸಿ

ಹಲ್ಲುಗಳ ಸ್ವಚ್ಚತೆ

ಹಲ್ಲುಗಳನ್ನು ಪ್ರತಿದಿನ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ.ಹಲ್ಲುಗಳ ಹಳದಿ ಬಣ್ಣವನ್ನು ಹೋಗಲಾಡಿಸಿ, ಮುತ್ತಿನಂತೆ ಹೊಳೆಯುವಂತೆ ಮಾಡಲು 3 ವಸ್ತುಗಳನ್ನು ಬಳಸಬಹುದು.

ಹಳದಿ ಕಲೆಗೆ ಪರಿಹಾರ

ನಾವು ಸೇವಿಸುವ ಆಹಾರ ಪದಾರ್ಥಗಳು ಹಲ್ಲಿನಲ್ಲಿ ಸೇರಿಕೊಂಡು ಹಲ್ಲಿನಲ್ಲಿ ಹಳದಿ ಕಲೆಗಳು ಉಂಟಾಗುತ್ತದೆ. ಇದನ್ನು ಸೂಕ್ತ ಸಮಯದಲ್ಲಿ ಶುಚಿಗೊಳಿಸದಿದ್ದರೆ ಹಲ್ಲುಗಳಿಂದ ವಸಡುಗಳಿಗೂ ಇದು ತಲುಪುತ್ತದೆ.

ಬೇಕಿಂಗ್ ಸೋಡಾ

ಹಲ್ಲುಗಳನ್ನು ಮುತ್ತಿನಂತೆ ಹೊಳೆಯುವಂತೆ ಮಾಡಲು ಬೇಕಿಂಗ್ ಸೋಡಾ ಬಳಸಿ ಶುಚಿಗೊಳಿಸಬಹುದು.

ಉಪ್ಪುಮತ್ತು ಸಾಸಿವೆ ಎಣ್ಣೆ

ಹಿಂದಿನ ಕಾಲದಿಂದಲೂ ಉಪ್ಪು ಮತ್ತು ಸಾಸಿವೆ ಎಣ್ಣೆಯನ್ನು ಬಳಸಿ ಹಲ್ಲುಗಳನ್ನು ಶುಚಿ ಮಾಡುವ ಪದ್ಧತಿ ಇತ್ತು. ಹೀಗೆ ಮಾಡುವುದರಿಂದ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ.

ಉಪ್ಪುಮತ್ತು ಸಾಸಿವೆ ಎಣ್ಣೆ

ಇದಕಾಗಿ ಮೊದಲು ಸ್ವಲ್ಪ ಎಣ್ಣೆಗೆ ಉಪ್ಪು ಮಿಶ್ರಣ ಮಾಡಿ ಹಲ್ಲುಗಳನ್ನು ಸ್ವಚ್ಚಗೊಳಿಸಬೇಕು. ನಿಯಮಿತವಾಗಿ ಇದನ್ನು ಮಾಡುತ್ತಾ ಬಂದರೆ ಹಲ್ಲಿನಲ್ಲಿರುವ ಹಳದಿ ಮಾಯವಾಗುತ್ತದೆ.

ನಿಂಬೆ ಹಣ್ಣಿನ ಸಿಪ್ಪೆ

ನಿಂಬೆ ಹಣ್ಣಿನ ಸಿಪ್ಪೆಯನ್ನು ಹಲ್ಲಿನ ಮೇಲೆ ತಿಕ್ಕಿದರೆ ಹಲ್ಲಿನ ಹಳದಿ ಕಲೆಗಳು ಶಾಶ್ವತವಾಗಿ ನಿವಾರಣೆಯಾಗುತ್ತದೆ.

ನಿಂಬೆ ಹಣ್ಣಿನ ಸಿಪ್ಪೆ

ನಿಂಬೆಯ ಸಿಪ್ಪೆಯಲ್ಲಿರುವ ಸಿಟ್ರಿಕ್ ಆಮ್ಲದ ಕಾರಣ ಹಲ್ಲುಗಳಲ್ಲಿರುವ ಹಳದಿ ಕಲೆ ಪರಿಹಾರವಾಗುತ್ತದೆ.

ಆಕ್ಟಿವೆಟೆಡ್ ಚಾರ್ ಕೋಲ್

ಆಕ್ಟಿವೆಟೆಡ್ ಚಾರ್ ಕೋಲ್ ಬಳಸುವ ಮೂಲಕವೂ ಹಲ್ಲಿನಲ್ಲಿ ಅಂಟಿಕೊಂಡಿರುವ ಹಳದಿ ಕಲೆಗಳನ್ನು ಹೋಗಲಾಡಿಸಬಹುದು.

ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ

VIEW ALL

Read Next Story