ಬೆಳಗ್ಗೆ ಎದ್ದ ಕೂಡಲೇ ತುಳಸಿಯ ಒಂದು ಎಲೆ ಅಗಿದರೆ ಸಿಗುವುದು ಇಷ್ಟೆಲ್ಲಾ ಲಾಭ !

Ranjitha R K
May 13,2024

ತುಳಸಿ ಎಲೆ ಪ್ರಯೋಜನ

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಪ್ರತಿ ಮನೆಯಲ್ಲೂ ಪೂಜಿಸಲಾಗುತ್ತದೆ.

ತುಳಸಿ ಎಲೆ ಪ್ರಯೋಜನ

ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಇದರ ಸೇವನೆಯಿಂದ ಅನೇಕ ರೋಗಗಳು ವಾಸಿಯಾಗುತ್ತವೆ.

ತುಳಸಿ ಎಲೆ ಪ್ರಯೋಜನ

ಆಯುರ್ವೇದದ ಪ್ರಕಾರ ಆಂಟಿಬ್ಯಾಕ್ಟೀರಿಯಲ್, ಆ್ಯಂಟಿವೈರಲ್, ಆ್ಯಂಟಿ ಫಂಗಲ್ ನಂತಹ ಗುಣಗಳು ತುಳಸಿ ಎಲೆಗಳಲ್ಲಿ ಕಂಡುಬರುತ್ತವೆ. ಇದು ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

ತುಳಸಿ ಎಲೆ ಪ್ರಯೋಜನ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಅಗಿಯುತ್ತಿದ್ದರೆ ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ಬರುವುದಿಲ್ಲ. ಗಂಟಲು ನೋವಿನಿಂದಲೂ ಮುಕ್ತಿ ಸಿಗುತ್ತದೆ.

ಹೃದಯದ ಆರೋಗ್ಯಕ್ಕಾಗಿ

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ.

ಹೊಟ್ಟೆಯ ಸಮಸ್ಯೆಗಳು ದೂರವಾಗುತ್ತವೆ

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ದೂರುಗಳು ಬರುವುದಿಲ್ಲ.ಈ ಎಲೆಗಳು ಅಸಿಡಿಟಿ, ಮಲಬದ್ಧತೆ, ಅಜೀರ್ಣ,ಹುಳಿ ತೇಗು ಮುಂತಾದ ಸಮಸ್ಯೆಗಳಿಂದಲೂ ನಿಮ್ಮನ್ನು ನಿವಾರಿಸುತ್ತದೆ.

ಚರ್ಮದ ಆರೈಕೆ

ಪ್ರತಿದಿನ ಬೆಳಗ್ಗೆ ತುಳಸಿ ಎಲೆಗಳನ್ನು ಜಗಿಯುವುದರಿಂದ ತ್ವಚೆಯು ಹೊಳೆಯುತ್ತದೆ.ಇದು ಮೊಡವೆಗಳನ್ನು ಸಹ ನಿವಾರಿಸುತ್ತದೆ.

ಬಾಯಿ ವಾಸನೆ ಹೋಗಲಾಡಿಸುತ್ತದೆ

ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಇದು ಬ್ಯಾಕ್ಟೀರಿಯಾವನ್ನು ನಿವಾರಿಸುವ ಶಕ್ತಿ ಹೊಂದಿದೆ.


ಸೂಚನೆ:ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ

VIEW ALL

Read Next Story