ರಾತ್ರಿ ಮಲಗುವುದಕ್ಕೆ ಮುನ್ನ ಓಮಕಾಳು ತಿಂದರೆ ಗ್ಯಾಸ್, ಆಸಿಡಿಟಿ, ಅಜೀರ್ಣ, ಮಲಬದ್ದತೆ ಮುಂತಾದ ಸಮಸ್ಯೆ ದೂರವಾಗುವುದು.
ಒಂದು ಚಮಚ ಹುರಿದ ಓಮ ಕಾಳನ್ನು ರಾತ್ರಿ ಮಲಗುವ ಮುನ್ನ ಸೇವಿಸಿದರೆ ಬೊಜ್ಜು ಕರಗುವುದು.ದೇಹ ತೂಕ ಕಡಿಮೆಯಗುವುದಕ್ಕೆ ಸಹಾಯವಾಗುವುದು.
ಗಂಟಲಿನಲ್ಲಿ ಕಿರಿಕಿರಿ, ಶೀತ, ಕೆಮ್ಮು ಇದ್ದರೂ ರಾತ್ರಿ ಮಲಗುವ ಮುನ್ನ ಓಮ ಕಾಳು ಸೇವಿಸಬಹುದು.
ರಾತ್ರಿ ಮಲಗುವ ಮುನ್ನ ಓಮ ಕಾಳು ಸೇವಿಸಿದರೆ ಮನಸ್ಸು ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
ಮಂಡಿ, ಕೀಲುಗಳಲ್ಲಿ ಕಾಣಿಸಿಕೊಳ್ಳುವ ನೋವು ದೂರವಾಗಬೇಕಾದರೆ ರಾತ್ರಿ ಮಲಗುವ ಮುನ್ನ ಓಮ ಕಾಳು ಸೇವಿಸಬೇಕು.
ಇನ್ನು ದೇಹವನ್ನು ನಿರ್ವಿಷ ಮಾಡಬೇಕಾದರೆ ರಾತ್ರಿ ಮಲಗುವುದಕ್ಕೆ ಮುನ್ನ ಒಂದು ಚಮಚ ಓಮ ಕಾಳು ಸೇವಿಸಬೇಕು.
ರಾತ್ರಿ ಮಲಗುವ ಮುನ್ನ ಓಮ ಕಾಳು ಆಗಿದರೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಕಡಿಮೆಯಾಗುತ್ತದೆ.ಇದು ಬಾಯಿ ವಾಸನೆ ಬಾರದಂತೆ ನೋಡಿಕೊಳ್ಳುತ್ತದೆ.
ರಾತ್ರಿ ಮಲಗುವ ಮುನ್ನ ಓಮ ಕಾಳು ಸೇವಿಸಿದರೆ ಬಿಪಿ,ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.zee kannada news ಇದನ್ನು ಖಚಿತಪಡಿಸುವುದಿಲ್ಲ.