ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಕಟ್ಟೆ ಇದ್ದೇ ಇರುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನ ನೀಡಲಾಗಿದೆ.
ಧರ್ಮ ಶಾಸ್ತ್ರಗಳ ಪ್ರಕಾರ, ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ.
ತುಳಸಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಅಂತಹ ಮನೆಯಲ್ಲಿ ಸುಖ, ಶಾಂತಿಗೆ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ತುಳಸಿ ಸಸ್ಯವನ್ನು ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ಮನೆಯವರ ಅದೃಷ್ಟವೂ ಬದಲಾಗುತ್ತದೆ.
ಯಾವ ಮನೆಯಲ್ಲಿ ತುಳಸಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಬಡತನ ಇರುವುದಿಲ್ಲ ಎನ್ನಲಾಗುತ್ತದೆ.
ನಿಮ್ಮ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದ್ದರೆ ತುಳಸಿಗೆ ದೀಪ ಹಚ್ಚುವಾಗ ಒಂದು ಪರಿಹಾರ ಕೈಗೊಳ್ಳುವುದರಿಂದ ಹಣದ ಸುರಿಮಳೆಯೇ ಸುರಿಯುತ್ತದೆ.
ಜ್ಯೋತಿಷ್ಯದ ಪ್ರಕಾರ, ತುಳಸಿ ಕಟ್ಟೆ ಬಳಿ ದೀಪ ಬೆಳಗಿಸುವಾಗ ಅದರಲ್ಲಿ ಚಿಟಿಕೆ ಅರಿಶಿನ ಹಾಕಿ ದೀಪ ಹಚ್ಚುವುದರಿಂದ ಅಂತಹ ಮನೆಯಲ್ಲಿ ಧನಲಕ್ಷ್ಮಿ ಪ್ರವೇಶವಾಗಿ, ಬಡತನ ತೊಲಗಿ ಕೆಲವೇ ದಿನಗಳಲ್ಲಿ ಸಿರಿವಂತರಾಗಬಹುದು ಎನ್ನಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.