ತೂಕ ನಷ್ಟಕ್ಕೆ, ಜನರು ಮೊದಲು ತಮ್ಮ ಆಹಾರದಿಂದ ತುಪ್ಪವನ್ನು ನಿಲ್ಲಿಸುತ್ತಾರೆ. ಏಕೆಂದರೆ ತುಪ್ಪ ತೂಕವನ್ನು ಹೆಚ್ಚಿಸುತ್ತದೆ ಎನ್ನುವುದು ಸಾಮಾನ್ಯವಾಗಿ ಇರುವ ಭಾವನೆ.
ಆದರೆ ತಜ್ಞರ ಪ್ರಕಾರ ಚಪಾತಿಗೆ ತುಪ್ಪ ಹಚ್ಚಿದರೆ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯಾಗುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಚಪಾತಿಗೆ ತುಪ್ಪ ಹಚ್ಚುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಚಪಾತಿಗೆ ತುಪ್ಪ ಬೆರೆಸಿ ತಿನ್ನುವುದರಿಂದ ಹೊಟ್ಟೆ ಬಹಳ ಹೊತ್ತಿನವರೆಗೆ ತುಂಬಿರುತ್ತದೆ. ಇದರಿಂದ ಇಲ್ಲಸಲ್ಲದ ತಿನಿಸುಗಳನ್ನು ತಿನ್ನುವುದು ತಪ್ಪುತ್ತದೆ.
ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ ಅದನ್ನು ನಿವಾರಿಸಲು ತುಪ್ಪ ಸಹಾಯ ಮಾಡುತ್ತದೆ.
ತುಪ್ಪ ಲುಬ್ರಿಕೆಶನ್ ಆಗಿ ಕೆಲಸ ಮಾಡುತ್ತದೆ. ಹಾಗಾಗಿ ಚಪಾತಿ ಸೇವಿಸುವಾಗ ತುಪ್ಪ ಹಚ್ಚಿ ಸೇವಿಸಿದರೆ ಒಳ್ಳೆಯದು.
ಚಪಾತಿಗೆ ತುಪ್ಪ ಹಚ್ಚುವುದರಿಂದ ನೀವು ದಪ್ಪಗಾಗುತ್ತೀರಿ ಎಂದು ಯೋಚಿಸುತ್ತಿದ್ದರೆ ನಿಮ್ಮ ಯೋಚನೆ ತಪ್ಪು.
ಚಪಾತಿಗೆ ತುಪ್ಪ ಹಚ್ಚಿದರೆ ಅನೇಕ ಪ್ರಯೋಜನಗಳಾಗುತ್ತವೆ. ಆದರೆ ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಹಚ್ಚಬೇಕು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.