ಚಳಿಗಾಲದಲ್ಲಿ ಸಾಸಿವೆ ಎಣ್ಣೆ ಮಸಾಜ್ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ನಂತಹ ಪೋಷಕಾಂಶಗಳು ದೇಹವನ್ನು ಅನೇಕ ರೋಗಗಳಿಂದ ದೂರವಿಡುತ್ತವೆ.
ಸಾಸಿವೆ ಎಣ್ಣೆಯಿಂದ ಪಾದಗಳ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸುಗಮವಾಗಿ ನಡೆಯುತ್ತದೆ. ಇದರಿಂದ ಪಾದ ಊದಿಕೊಳ್ಳುವ ಸಮಸ್ಯೆ ದೂರವಾಗುತ್ತದೆ.
ಅತಿಯಾಗಿ ಸುಸ್ತಾಗಿದ್ದಾರೆ ಸಾಸಿವೆ ಎಣ್ಣೆಯಿಂದ ಪಾದಗಳ ಮಸಾಜ್ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಸಾಸಿವೆ ಎಣ್ಣೆ ಮಸಾಜ್ ಮಂಡಿ ನೋವಿನಿಂದ ಮುಕ್ತಿ ನೀಡುತ್ತದೆ. ಯಾಕೆಂದರೆ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿದರೆ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಆಗುತ್ತದೆ.
ಪಾದಗಳಿಗೆ ಸಾಸಿವೆ ಎಣ್ಣೆ ಮಸಾಜ್ ಮಾಡುವ ಮೂಲಕ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
ಸಂಧಿವಾತದಿಂದ ತೊಂದರೆ ಅನುಭವಿಸುತ್ತಿದ್ದರೆ ಸಾಸಿವೆ ಎಣ್ಣೆ ಮಸಾಜ್ ಮಾಡಿದರೆ ಪರಿಹಾರ ಸಿಗುತ್ತದೆ.
ಸಾಸಿವೆ ಎಣ್ಣೆ ಮಸಾಜ್ ಮಾಡಿದರೆ ಮೂಳೆಗಳು ಬಳಗೊಳ್ಳುತ್ತವೆ.
ಸಾಸಿವೆ ಎಣ್ಣೆ ದಿನದ ಆಯಾಸ ಒತ್ತಡದಿಂದ ಪರಿಹಾರ ನೀಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.