ಮಧುಮೇಹ ಎನ್ನುವುದು ಈಗ ಸಣ್ಣ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಮಧುಮೇಹದ ಸಮಸ್ಯೆ ಇದ್ದವರು ತಮ್ಮ ಊಟ ತಿಂಡಿಯ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕಾಗಿರುವ ಅಗತ್ಯವಿದೆ.
ತಪ್ಪಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿ, ಪ್ರಾಣಕ್ಕೆ ಸಂಚಕಾರವಾಗಬಹುದು. ಇನ್ನು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಮಧುಮೇಹ ರೋಗಿಗಳು ಸಕ್ಕರೆ ಸೇವಿಸಬಾರದು ಎಂದು ಹೇಳಲಾಗುತ್ತದೆ. ಅದು ಸರಿ. ಆದರೆ ಸಕ್ಕರೆ ಬದಲು ಬೆಲ್ಲ ಸೇವಿಸಬಹುದು ಎನ್ನುವ ಅಭಿಪ್ರಾಯವನ್ನು ಬಹುತೇಕರು ಹೊಂದಿರುತ್ತಾರೆ.
ನಿಜಕ್ಕೂ ಮಧುಮೇಹಿಗಳು ಸಕ್ಕರೆ ಬದಲು ಬೆಲ್ಲ ಸೇವಿಸುತ್ತಿದ್ದರೆ ಅದು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು.ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸಬಹುದು ಎನ್ನುವುದು ತಪ್ಪು ತಿಳುವಳಿಕೆ.
ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಾರದು. ಶ್ವಾಸಕೋಶದ ಸೋಂಕು, ಗಂಟಲು ನೋವು, ಮೈಗ್ರೇನ್ ಮತ್ತು ಅಸ್ತಮಾ ಸಮಸ್ಯೆಯಲ್ಲಿ ಬೆಲ್ಲದ ಸೇವನೆ ಪ್ರಯೋಜನಕಾರಿ.
ಮಧುಮೇಹದ ಸಮಸ್ಯೆಯಲ್ಲಿ ಬೆಲ್ಲವನ್ನು ತಿಂದರೆ ಹಾನಿಯುಂಟಾಗಬಹುದು. ಬೆಲ್ಲದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳಿವೆ. ಆದರೆ ಇದು ಮಧುಮೇಹ ರೋಗಿಗಳಿಗೆ ಸೂಕ್ತವಲ್ಲ.
ಬೆಲ್ಲದಲ್ಲಿ ಶೇಕಡಾ 65 ರಿಂದ 85 ರಷ್ಟು ಸುಕ್ರೋಸ್ ಇರುತ್ತದೆ. ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಇದರ ಸೇವನೆಯು ಮಧುಮೇಹ ರೋಗಿಗಳಿಗೂ ಅಪಾಯಕಾರಿ.
ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನದೆ ಸಾವಯವ ಜೇನುತುಪ್ಪವನ್ನು ಸೇವಿಸಬಹುದು.
ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.