ಕಾಫಿಯನ್ನು ಈ ರೀತಿ ಬಳಸಿದರೆ ಹೆಚ್ಚುವುದು ಮುಖದ ಕಾಂತಿ

Ranjitha R K
May 06,2024

ತ್ವಚೆಯ ಕಾಂತಿ

ಕಾಫಿಯಲ್ಲಿರುವ ಕ್ಲೆನ್ಸಿಂಗ್ ಗುಣಗಳು ಮುಖದಲ್ಲಿರುವ ಡೆಡ್ ಸೆಲ್ ಗಳನ್ನೂ ತೆಗೆದು ಚರ್ಮವನ್ನು ಕಾಂತಿಯುತವನ್ನಾಗಿಸುತ್ತದೆ.

ಮೊಸರು

ಒಂದು ಚಮಚ ಕಾಫಿಯಲ್ಲಿ ಮೊಸರು ಬೆರೆಸಿ ಸ್ಕ್ರುಬ್ ತಯಾರಿಸಿಕೊಳ್ಳಿ. ಇದರಿಂದ ೨ ನಿಮಿಷಗಳವರೆಗೆ ಮುಖದ ಮೇಲೆ ಉಜ್ಜಿ ಮಸಾಜ್ ಮಾಡಿ.

ತೆಂಗಿನೆಣ್ಣೆ

ತೆಂಗಿನೆಣ್ಣೆ ಮತ್ತು ಕಾಫಿಯನ್ನು ಒಟ್ಟಿಗೆ ಬೆರೆಸಿ ಸ್ಕ್ರಬ್ ತಯಾರಿಸಬಹುದು. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಚಕ್ಕೆ ಪುಡಿ

ಕಾಫಿ ಮತ್ತು ಚಕ್ಕೆಯ ಸ್ಕ್ರುಬ್ ಅನ್ನು ತಯಾರಿಸಬಹುದು. ಒಂದು ಚಮಚ ಕಾಪಿ ಮತ್ತು ಒಂದು ಚಮಚ ಚಕ್ಕೆ ಪುಡಿ ಸ್ವಲ್ಪ ತೆಂಗಿನೆಣ್ಣೆ ಹಾಕಿ ಪೇಸ್ಟ್ ಮಾಡಿ ಮುಖದ ಮೇಲೆ ಹಚ್ಚಿ.

ಜೇನು ತುಪ್ಪ

ಒಂದು ಚಮಚ ಕಾಫಿ ಪುಡಿಯಲ್ಲಿ ಒಂದು ಚಮಚ ಜೇನು ತುಪ್ಪ ಬೆರೆಸಿ ಸ್ಕ್ರಬ್ ತಯಾರಿಸಿಕೊಳ್ಳಿ. ಇದು ಒರಟು ಚರ್ಮದ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ತುರಿದ ಬಾಳೆಹಣ್ಣು

ಒಂದು ಚಮಚ ಕಾಫಿಗೆ ಒಂದು ಚಮಚ ತುರಿದ ಬಾಳೆಹಣ್ಣು ಮತ್ತು ೨ ಚಮಚ ಆಲಿವ್ ಎಣ್ಣೆಯನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story