ಮೊಸರಿನ ಜೊತೆ ಇದನ್ನು ಬೆರೆಸಿ ಸೇವಿಸಿದರೆ ಉದರದ ಸಮಸ್ಯೆ ದೂರವಾಗುವುದು

Ranjitha R K
May 21,2024


ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯ ನಿವಾರಣೆಗೆ ಮೊಸರು ಉತ್ತಮ ಮನೆ ಮದ್ದು.

ಮೊಸರಿನ ಪೋಷಕಾಂಶ

ಮೊಸರಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿರುತ್ತದೆ. ಉದರ ಸಮಸ್ಯೆಯ ಪರಿಹಾರಕ್ಕೆ ಇದು ಉತ್ತಮ ಮನೆ ಮದ್ದು ಎಂದು ಹೇಳಲಾಗುತ್ತದೆ.

ಮೊಸರು ಮತ್ತು ಮೆಂತ್ಯೆ

ಮೊಸರಿಗೆ ಮೆಂತ್ಯೆ ಬೆರೆಸಿ ಸೇವಿಸಿದರೆ ಹೊಟ್ಟೆ ಸ್ವಚ್ಚವಾಗುತ್ತದೆ.

ಮೊಸರು ಮತ್ತು ಓಮ

ಮೊಸರಿಗೆ ಓಮ ಕಾಳು ಬೆರೆಸಿ ಸೇವಿಸಿದರೆ ಮಲಬದ್ದತೆ ಸಮಸ್ಯೆ ದೂರವಾಗುವುದು. ಇದು ಬಾಯಿಯ ದುರ್ವಾಸನೆ ಕೂಡಾ ತಡೆಯುತ್ತದೆ.

ಮೊಸರು ಮತ್ತು ಸೌತೆಕಾಯಿ :

ಮಲಬದ್ದತೆ ಸಮಸ್ಯೆಯಿಂದ ಪರಿಹಾರ ಪಡೆಯಲು ಮೊಸರಿಗೆ ಸೌತೆಕಾಯಿ ಬೆರೆಸಿ ಸೇವಿಸಬೇಕು.

ಮೊಸರು ಮತ್ತು ಬ್ಲಾಕ್ ಸಾಲ್ಟ್

ಮೊಸರಿಗೆ ಬ್ಲಾಕ್ ಸಾಲ್ಟ್ ಸೇರಿಸಿ ತಿಂದರೆ ಗ್ಯಾಸ್ ಸಮಸ್ಯೆ ದೂರಾಗುವುದು.

ಮೊಸರು ಮತ್ತು ಸಕ್ಕರೆ

ಮೊಸರಿಗೆ ಸಕ್ಕರೆ ಬೆರೆಸಿ ಸೇವಿಸಿದರೆ ಮಲಬದ್ದತೆ ಸೇರಿದಂತೆ ಹೊಟ್ಟೆಯ ಅನೇಕ ಸಮಸ್ಯೆಗಳು ದೂರವಾಗುವುದು.

ಮೊಸರು ಮತ್ತು ಜೀರಿಗೆ

ಮೊಸರಿಗೆ ಜೀರಿಗೆ ಪುಡಿ ಬೆರೆಸಿ ಸೇವಿಸಿದರೆ ಉದರಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆ ನಿವಾರಣೆಯಾಗುವುದು.


ಸೂಚನೆ: ಪ್ರಿಯ ಓದುಗರೇ,ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story