ಚಳಿಗಾಲದಲ್ಲಿ ಸೌತೆಕಾಯಿ ತಿನ್ನಬೇಕೋ ? ಬೇಡವೋ ?

ಚಳಿಗಾಲದಲ್ಲಿ ಸೌತೆಕಾಯಿ ತಿನ್ನಬಹುದೇ ?

ಜನರು ಸಾಮಾನ್ಯವಾಗಿ ಚಳಿಗಾಲದಲ್ಲಿ ಸೌತೆಕಾಯಿಯನ್ನು ತಿನ್ನುವುದಿಲ್ಲ. ಚಳಿಗಾಲದಲ್ಲಿ ಸೌತೆಕಾಯಿ ತಿಂದರೆ ಕಾಯಿಲೆ ಬರಬಹುದು ಎನ್ನುವ ಅಭಿಪ್ರಾಯ ಹಲವರದ್ದು.

ಚಳಿಗಾಲದಲ್ಲಿ ಸೇವಿಸಬಾರದು

ಚಳಿಗಾಲದಲ್ಲಿ ಶೀತ, ಕೆಮ್ಮಿನ ಅಪಾಯ ಇರುತ್ತದೆ. ಹೀಗಾಗಿ ಶರೀರವನ್ನು ಒಳಗಿನಿಂದ ಬಿಸಿಯಾಗಿ ಇಡಬೇಕಾಗುತ್ತದೆ. ಹಾಗಾಗಿ ತಂಪು ಗುಣವಿರುವ ಸೌತೆಕಾಯಿಯನ್ನು ಚಳಿಗಾಲದಲ್ಲಿ ಸೇವಿಸಬಾರದು.

ಶೀತ, ಕೆಮ್ಮು ಇದ್ದರೆ ಸೇವಿಸಬಾರದು

ಒಂದು ವೇಳೆ ನೀವು ಶೀತ, ಕೆಮ್ಮು ಕಫದಿಂದ ಬಳಲುತ್ತಿದ್ದರೆ ಅವರು ಸೌತೆಕಾಯಿ ತಿನ್ನಲೇಬಾರದು.

ಮಧ್ಯಾಹ್ನ ಸೌತೆಕಾಯಿ ತಿನ್ನಬಹುದು

ನಿಮಗೆ ಸೌತೆಕಾಯಿ ತಿನ್ನುವುದು ಬಹಳ ಇಷ್ಟವಾಗಿದ್ದರೆ ಮಧ್ಯಾಹ್ನ ಭೋಜನದ ವೇಳೆ ಸೌತೆಕಾಯಿ ತಿನ್ನಬಹುದು.

ನೀರಿನ ಪ್ರಮಾಣ ಕಾಪಾಡುತ್ತದೆ

ಸೌತೆಕಾಯಿಯಲ್ಲಿ 96 ಶೇ. ದಷ್ಟು ನೀರಿನ ಪ್ರಮಾಣವಿರುತ್ತದೆ. ಹಾಗಾಗಿ ಇದನ್ನು ತಿನ್ನುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಅಲ್ಪ ಪ್ರಮಾಣದಲ್ಲಿ ಸೌತೆಕಾಯಿ ತಿನ್ನಬಹುದು.

ಕಡಿಮೆ ಕ್ಯಾಲೋರಿ

ಸೌತೆಕಾಯಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಇರುತ್ತದೆ. ಇದರಲ್ಲಿ ಕೇವಲ 15 -17 ರಷ್ಟು ಮಾತ್ರ ಕ್ಯಾಲೋರಿ ಇರುತ್ತದೆ.

ರಾತ್ರಿ ಭೋಜನದಲ್ಲಿ ಸೇವಿಸಬಾರದು.

ಸೌತೆಕಾಯಿಯ ಗುಣ ತಂಪಾಗಿರುತ್ತದೆ. ಹಾಗಾಗಿ ಇದನ್ನೂ ರಾತ್ರಿ ಭೋಜನದಲ್ಲಿ ಸೇವಿಸಬಾರದು.

ಆಸಿಡಿಟಿಗೆ ಪರಿಹಾರ

ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿರುವ ವಿಷ ದೇಹದಿಂದ ಹೊರ ಹೋಗುತ್ತದೆ. ಆಸಿಡಿಟಿ ಸಮಸ್ಯೆ ಇದ್ದರೆ ಸೌತೆಕಾಯಿ ಸೇವನೆ ಬಹಳ ಸಹಕಾರಿಯಾಗಿದೆ.


ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story