ನೆಲ್ಲಿಕಾಯಿ ತಿನ್ನುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಮಾತ್ರವಲ್ಲ, ಇದರಲ್ಲಿ ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್, ಮೆಗ್ನೀಸಿಯಮ್, ಫೈಬರ್, ಪ್ರೋಟೀನ್, ವಿಟಮಿನ್ ಎ, ಬಿ, ಸಿ ಇತ್ಯಾದಿ ಅಂಶಗಳು ಕಂಡು ಬರುತ್ತದೆ. ಇದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಅವುಗಳೆಂದರೆ...

ದೃಷ್ಟಿ ಸುಧಾರಣೆ

ನಿಯಮಿತವಾಗಿ ಆಮ್ಲಾ ಜ್ಯೂಸ್ ಕುಡಿಯುವುದರಿಂದ ಇದು ಕಣ್ಣಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ದೃಷ್ಟಿ ದೋಷವನ್ನು ನಿವಾರಿಸುತ್ತದೆ.

ಮಧುಮೇಹ

ನೆಲ್ಲಿಕಾಯಿ ದೇಹದಲ್ಲಿ ಹಾರ್ಮೋನ್‌ಗಳನ್ನು ಬಲಪಡಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೂ ಪ್ರಯೋಜನಕಾರಿ.

ಮೂಳೆಗಳಿಗೆ

ನಿಯಮಿತವಾಗಿ ಆಮ್ಲಾ ಸೇವಿಸುವುದರಿಂದ ಇದು ಎಲುಬುಗಳನ್ನು ಬಲಗೊಳಿಸುತ್ತದೆ.

ಒತ್ತಡದಿಂದ ಪರಿಹಾರ

ನೆಲ್ಲಿಕಾಯಿ ತಿನ್ನುವುದರಿಂದ ಇದು ಒತ್ತಡದಿಂದ ಪರಿಹಾರ ನೀಡುವುದಲ್ಲದೆ, ಒಳ್ಳೆಯ ನಿದ್ರೆಯನ್ನು ಸಹ ಪ್ರೋತ್ಸಾಹಿಸುತ್ತದೆ.

ಮೊಡವೆ

ಆಮ್ಲಾ ನೈಸರ್ಗಿಕ ರಕ್ತ ಶುದ್ಧಿಕಾರಕವಾಗಿದ್ದು ಇದು ಮುಖದಲ್ಲಿ ಮೂಡುವ ಮೊಡವೆಗಳಿಂದ ಮುಕ್ತಿ ನೀಡುತ್ತದೆ.

ತೂಕ ಇಳಿಕೆ

ನಿಯಮಿತ ಆಮ್ಲಾ ಜ್ಯೂಸ್ ಸೇವನೆಯು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story