ಈ 7 ರೋಗಗಳಿಗೆ ಸಂಜೀವಿನಿ ಕೊತ್ತಂಬರಿ ಬೀಜ

Ranjitha R K
Jan 17,2024

ಸೂಪರ್ ಫುಡ್

ಕೊತ್ತಂಬರಿ ಬೀಜಗಳನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಹೀಗೆ ಹಲವಾರು ಔಷಧೀಯ ಗುಣಗಳು ಇದರಲ್ಲಿವೆ. ಈ ಗುಣಲಕ್ಷಣಗಳಿಂದಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಕೊತ್ತಂಬರಿ ಬೀಜ ಆಂಟಿ ಇನ್ಫ್ಲೇಮೇಟರಿ ಗುಣಗಳಿಂದ ಸಮೃದ್ದವಾಗಿದೆ. ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ಸುಧಾರಿಸುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೊತ್ತಂಬರಿ ಬೀಜ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಮಾತ್ರವಲ್ಲ ಇದರಿಂದ ರಕ್ತದೊತ್ತಡ ಕೂಡಾ ಸರಿಯಾಗಿರುತ್ತದೆ.

ತೂಕ ನಿಯಂತ್ರಣ

ಕೊತ್ತಂಬರಿ ಬೀಜ ಚಯಾಪಚಯ ಸುಧಾರಿಸಲು ಸಹಾಯ ಮಾಡುತ್ತದೆ. ಇದು ತೂಕ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಮಧುಮೇಹ ನಿಯಂತ್ರಣಕ್ಕೆ

ಕೊತ್ತಂಬರಿ ಬೀಜದಲ್ಲಿ ಆಂಟಿಡಯಾಬಿಟಿಕ್ ಗುಣಗಳಿರುತ್ತದೆ. ಇದು ರಕ್ತದ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಆಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ದವಾಗಿರುವ ಕೊತ್ತಂಬರಿ ಬೀಜ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕೂದಲಿನ ಆರೋಗ್ಯಕ್ಕೂ

ಕೊತ್ತಂಬರಿ ಬೀಜದಲ್ಲಿರುವ ವಿಟಮಿನ್ ಸಿ. ವಿಟಮಿನ್ ಕೆ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು.

ಕಣ್ಣಿನ ದೃಷ್ಟಿಗಾಗಿ

ಕೊತ್ತಂಬರಿ ಬೀಜದಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ

VIEW ALL

Read Next Story