ಕರಿಬೇವಿನಿಂದ ಈ ಹತ್ತು ಆರೋಗ್ಯ ಸಮಸ್ಯೆಗಳ ನಿವಾರಣೆ

ಕರಿಬೇವನ್ನು ಅನಾದಿ ಕಾಲದಿಂದಲೂ ಅನೇಕ ರೋಗಗಳ ನಿವಾರಣೆಗಾಗಿ ಬಳಸಲಾಗುತ್ತಿದೆ. ಇದರ ಪ್ರಯೋಜನಗಳನ್ನು ನೋಡೋಣ.

Ranjitha R K
Jul 10,2023

ತ್ವಚೆಯ ಆರೋಗ್ಯಕ್ಕೆ

ಸ್ಕಿನ್ ಟ್ಯಾನಿಂಗ್ ಹೋಗಲಾಡಿಸಿ ನ್ಯಾಚ್ಯುರಲ್ ಗ್ಲೋ ತರಲು ಕರಿಬೇವನ್ನು ಬಳಸಲಾಗುತ್ತದೆ.

ಕೂದಲು ಉದುರುವುದನ್ನು ತಡೆಯುತ್ತದೆ

ಕರಿ ಬೆವಿನಲ್ಲಿರುವ ಆಂಟಿ ಆಕ್ಸಿಡೆಂಟ್ ಕೂದಲು ಉದುರುವುದನ್ನು ತಡೆಯುತ್ತದೆ. ಮಾತ್ರವಲ್ಲ ಕೂದಲು ಬೆಳೆಯಲು ಕೂಡಾ ಸಹಾಯ ಮಾಡುತ್ತದೆ.

ಭೇದಿ ತಡೆಗೆ ಅನುಕೂಲ

ಕರಿಬೇವಿನಲ್ಲಿ ಕಂಡುಬರುವ ಕಾರ್ಬೋಜೆಲ್ ಅಲ್ಕಾಯಿಡ್ಸ್ ಲೂಸ್ ಮೋಶನ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಲಬದ್ದತೆ ನಿವಾರಣೆಗೆ

ಕರಿಬೇವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದ ಮಲಬದ್ದತೆ ಸಮಸ್ಯೆಗೂ ಈ ಎಲೆ ಪರಿಹಾರವಾಗಿದೆ.

ಲಿವರ್ ಆರೋಗ್ಯಕ್ಕೆ

ಲಿವರ್ ಡ್ಯಾಮೇಜ್ ಆಗದಂತೆ ತಡೆಯುವ ಅಂಶ ಕೂಡಾ ಕರಿಬೇವಿನಲ್ಲಿ ಅಡಗಿದೆ.

ಕಣ್ಣಿನ ಆರೋಗ್ಯಕ್ಕೆ

ಕರಿಬೇವಿನಲ್ಲಿ ಕೆರೆಟಿನಾಯ್ದ್ ಯುಕ್ತ ವಿಟಮಿನ್ ಇರುತ್ತದೆ. ಇದು ದೃಷ್ಟಿ ಮಂಜಾಗುವುದನ್ನು ತಡೆಯುತ್ತದೆ.

ಸೋಂಕಿನ ವಿರುದ್ದ ಹೋರಾಡುತ್ತದೆ

ಕರಿಬೇವಿನಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣಗಳು ಅಡಗಿವೆ. ಇದು ಸೋಂಕಿನ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.

ಬ್ಲಡ್ ಪ್ರೆಶರ್ ತಡೆಗೆ ಸಹಾಯಕ

ರಕ್ತ ಪರಿಚಲನೆಗೆ ಸಂಬಧಿಸಿದ ಸಮಸ್ಯೆ ಬ್ಲಡ್ ಪ್ರೆಶರ್ ಮುಂತಾದುವುಗಳ ತಡೆಗೆ ಸಹಾಯ ಮಾಡುತ್ತದೆ.

ಬ್ಲಡ್ ಶುಗರ್ ನಿಯಂತ್ರಿಸುತ್ತದೆ

ಹೆಚ್ಚುತ್ತಿರುವ ಬ್ಲಡ್ ಶುಗರ್ ಅನ್ನು ಕೂಡಾ ನಿಯಂತ್ರಣದಲ್ಲಿ ಇಡಲು ಇದು ಸಹಾಯ ಮಾಡುತ್ತದೆ.

VIEW ALL

Read Next Story