ಶುಂಠಿ ಬಳಕೆಯಿಂದ ಈ ಆರೋಗ್ಯ ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ!

ಶುಂಠಿ

ಶುಂಠಿ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಜನಪ್ರಿಯ ಮಸಾಲೆಯಾಗಿದೆ. ಇದು ಖಾದ್ಯದ ರುಚಿಯಷ್ಟೇ ಹೆಚ್ಚಿಸುವುದಿಲ್ಲ ಆರೋಗ್ಯವನ್ನೂ ವೃದ್ಧಿಸುತ್ತದೆ.

ಉತ್ತಮ ಜೀರ್ಣಕಾರಿ

ಶುಂತಿಯನ್ನು ಉತ್ತಮ ಜೀರ್ಣಕಾರಿ ಎಂದು ಪರಿಗಣಿಸಲಾಗಿದೆ. ಶುಂಠಿ ಬಳಕೆಯಿಂದ ಹೊಟ್ಟೆ ಮತ್ತು ಕರುಳು ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

ವಾಕರಿಕೆಗೆ ಚಿಕಿತ್ಸೆ

ಶುಂಠಿ ಬಳಕೆಯು ವಾಕರಿಕೆ ತೀವ್ರತೆಯನ್ನು ಕಡಿಮೆ ಮಾಡಬಲ್ಲದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ನರಮಂಡಲ

ಮೆದುಳಿನಲ್ಲಿರುವ ಪೋಷಕಾಂಶಗಳು ನರಮಂಡಲದಲ್ಲಿ ಕ್ಷೀಣತೆಯನ್ನು ನಿಯಂತ್ರಿಸಲು ಸಹಕಾರಿ ಎನ್ನಲಾಗುತ್ತದೆ.

ಕೀಲು ನೋವು

ಆಹಾರದಲ್ಲಿ ಶುಂಠಿ ಬಳಕೆಯು ಕೀಲುಗಳಲ್ಲಿ ನೋವನ್ನು ನಿವಾರಿಸಲು ಪರಿಣಾಮಕಾರಿ ಮದ್ದು ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಮೈಗ್ರೇನ್

ಶುಂಠಿ ಚಹಾ ಸೇವನೆಯು ಮೈಗ್ರೇನ್ ತಲೆನೋವಿಗೆ ಅತ್ಯುತ್ತಮ ಮದ್ದು ಎಂದು ಫೈಟೊಥೆರಪಿ ರಿಸರ್ಚ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಿಂದ ತಿಳಿದುಬಂದಿದೆ.

ಮುಟ್ಟಿನ ನೋವಿಗೆ ಪರಿಹಾರ

ಶುಂಠಿಯು ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಕಂಡು ಬರುವ ನೋವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ಕೋಶಗಳು

ಶುಂಠಿ ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ಸಂಭಾವ್ಯ ಪರಿಹಾರವಾಗಿಡೇ ಎಂದು ಮಿಚಿಗನ್ ವಿಶ್ವವಿದ್ಯಾನಿಲಯದ ಸಮಗ್ರ ಕ್ಯಾನ್ಸರ್ ಕೇಂದ್ರದ ಒಂದು ಅಧ್ಯಯನ ತಿಳಿಸಿದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story