ನಿತ್ಯ ಈ ತರಕಾರಿ ಜ್ಯೂಸ್‌ಗಳನ್ನು ಕುಡಿದ್ರೆ ತ್ವರಿತ ತೂಕ ಇಳಿಕೆ ಜೊತೆಗೆ ಬೆಲ್ಲಿ ಫ್ಯಾಟ್ ಸಹ ಕರಗುತ್ತೆ

Published by: Yashaswini V | Jul 16, 2024

ಕೊತ್ತಂಬರಿ ಸೊಪ್ಪಿನ ಜ್ಯೂಸ್

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಫೈಬರ್ ಹೆಚ್ಚಾಗಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ನಿತ್ಯ ಕೊತ್ತಂಬರಿ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯ ಸುತ್ತಲೂ ಶೇಖರವಾಗಿರುವ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.

Published by: Yashaswini V | Jul 16, 2024

ಸೌತೆಕಾಯಿ ಜ್ಯೂಸ್

ಸೌತೆಕಾಯಿ ನಮ್ಮ ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಚಯಾಪಚಯವನ್ನು ಸಹ ಉತ್ತೇಜಿಸುತ್ತದೆ. ನಿತ್ಯ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ತ್ವರಿತವಾಗಿ ಬೆಲ್ಲಿ ಫ್ಯಾಟ್ ಕರಗಿಸಬಹುದು.

Published by: Yashaswini V | Jul 16, 2024

ಪಾಲಕ್ ಜ್ಯೂಸ್

ಜೀವಸತ್ವಗಳು, ಖನಿಜಗಳಲ್ಲಿ ಸಮೃದ್ಧವಾಗಿರುವ ಪಾಲಕ್ ಜ್ಯೂಸ್ ಅತ್ಯುತ್ತಮ ಡಿಟಾಕ್ಸ್ ಪಾನೀಯವಾಗಿದೆ.

Published by: Yashaswini V | Jul 16, 2024

ಕ್ಯಾರೆಟ್ ಜ್ಯೂಸ್

ಫೈಬರ್, ಬೀಟಾ-ಕ್ಯಾರೋಟಿನ್ ನಲ್ಲಿ ಸಮೃದ್ಧವಾಗಿರುವ ಕ್ಯಾರೆಟ್ ಜ್ಯೂಸ್ ತಯಾರಿಸಿ ಸೇವಿಸುವುದರಿಂದ ದೀರ್ಘ ಸಮಯದವರೆಗೆ ಹೊಟ್ಟೆ ತುಂಬಿರುತ್ತದೆ. ಇದು ತ್ವರಿತ ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಆಗಿದೆ.

Published by: Yashaswini V | Jul 16, 2024

ಬೀಟ್ರೂಟ್ ಜ್ಯೂಸ್

ಬೀಟ್ರೂಟ್ ಜ್ಯೂಸ್ ನಿಯಮಿತ ಸೇವನೆಯು ಯಕೃತ್ತಿನ ಕಾರ್ಯವನ್ನು ಬೆಂಬಲಿಸಿ ದೇಹವನ್ನು ನಿರ್ವಿಶೀಕರಣಗೊಳಿಸಬಲ್ಲ ಅತ್ಯುತ್ತಮ ಪಾನೀಯವಾಗಿದೆ.

Published by: Yashaswini V | Jul 16, 2024

ಹಾಗಲಕಾಯಿ ಜ್ಯೂಸ್

ರುಚಿಯಲ್ಲಿ ಕಹಿಯಾದ ಹಾಗಲಕಾಯಿಯ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದು ಹೊಟ್ಟೆಯ ಕೊಬ್ಬನ್ನು ಕರಗಿಸಿ ತ್ವರಿತ ತೂಕ ಇಳಿಕೆಯಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ.

Published by: Yashaswini V | Jul 16, 2024

ಟೊಮಾಟೊ ಜ್ಯೂಸ್

ಉತ್ಕರ್ಷಣ ನಿರೋಧಕಗಳಲ್ಲಿ ಹೇರಳವಾಗಿರುವ ಕಡಿಮೆ ಕ್ಯಾಲೋರಿಯುಕ್ತ ಟೊಮಾಟೊ ಜ್ಯೂಸ್ ಕುಡಿಯುವುದರಿಂದ ವೇಗವಾಗಿ ತೂಕ ಇಳಿಸಿಕೊಳ್ಳಬಹುದು.

Published by: Yashaswini V | Jul 16, 2024

ಸೋರೆಕಾಯಿ ಜ್ಯೂಸ್

ಕಡಿಮೆ ಕ್ಯಾಲೋರಿಯೊಂದಿಗೆ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಬಾಟಲ್ ಸೋರೆಕಾಯಿ ಜ್ಯೂಸ್ ಸೇವನೆಯು ದೇಹವನ್ನು ನಿರ್ವಿಷಗೊಳಿಸಿ ತ್ವರಿತ ತೂಕ ಇಳಿಕೆ ಜೊತೆಗೆ ಬೆಲ್ಲಿ ಫ್ಯಾಟ್ ಕರಗಿಸುವಲ್ಲಿ ಪರಿಣಾಮಕಾರಿ ಆಗಿದೆ.

Published by: Yashaswini V | Jul 16, 2024

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Jul 16, 2024

VIEW ALL

Read Next Story