ಈ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಲು ಚಳಿಗಾಲದಲ್ಲಿ ತಿನ್ನಲೇಬೇಕು ನುಗ್ಗೆಸೊಪ್ಪು

ನುಗ್ಗೆಸೊಪ್ಪು

ಚಳಿಗಾಲದಲ್ಲಿ ಮೊರಿಂಗಾ/ನುಗ್ಗೆಸೊಪ್ಪನ್ನು ಟ್ರೀ ಆಫ್ ಲೈಫ್ ಎಂದು ಕರೆಯಲಾಗುತ್ತದೆ.

ಆಯುರ್ವೇದ

ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ, ಎ ಮತ್ತು ಇ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ಗಳು ಸಮೃದ್ಧವಾಗಿದೆ. ಹಾಗಾಗಿಯೇ ಇದನ್ನು ಆಯುರ್ವೇದದ ಔಷಧಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ನುಗ್ಗೆಸೊಪ್ಪಿನ ಲಾಭ

ನುಗ್ಗೆಸೊಪ್ಪು ನೈಸರ್ಗಿಕವಾಗಿ ದೇಹವನ್ನು ಶಾಖವಾಗಿರಿಸುತ್ತದೆ. ಚಳಿಗಾಲದಲ್ಲಿ ನುಗ್ಗೆಸೊಪ್ಪನ್ನು ತಿನ್ನುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. ಅವುಗಳೆಂದರೆ...

ಇಮ್ಯುನಿಟಿ

ನುಗ್ಗೆಸೊಪ್ಪಿನಲ್ಲಿ ಕಬ್ಬಿಣ, ವಿಟಮಿನ್ ಎ ಸಮೃದ್ಧವಾಗಿದ್ದು ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದೃಷ್ಟಿ ದೋಷ

ನುಗ್ಗೆಸೊಪ್ಪಿನಲ್ಲಿರುವ ವಿಟಮಿನ್ ಎ ದೃಷ್ಟಿದೋಷವನ್ನು ನಿವಾರಿಸಿ, ಕಣ್ಣುಗಳ ಆರೋಗ್ಯವನ್ನು ಸುಧಾರಿಸುತ್ತದೆ.

ಚರ್ಮದ ಆರೋಗ್ಯ

ಬೇರೆ ಋತುಮಾನಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ಚರ್ಮದ ಆರೋಗ್ಯ ಹೆಚ್ಚು ಹಾಳಾಗುತ್ತದೆ. ಆದರೆ, ನುಗ್ಗೆ ಸೊಪ್ಪಿನ ಸೇವನೆಯಿಂದ ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಕೂದಲಿನ ಆರೋಗ್ಯ

ನುಗ್ಗೆಸೊಪ್ಪಿನಲ್ಲಿ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಹಲವು ಪೋಷಕಾಂಶಗಳಿವೆ. ಚಳಿಗಾಲದಲ್ಲಿ ನುಗ್ಗೆಸೊಪ್ಪಿನ ನಿಯಮಿತ ಬಳಕೆಯು ಹವಾಮಾನ ವೈಪರೀತ್ಯದಿಂದ ಉಂಟಾಗುವ ಶುಷ್ಕತೆಗೆ ಉತ್ತಮ ಚಿಕಿತ್ಸೆಯಾಗಿದೆ.

ಆಯಾಸ ನಿವಾರಣೆ

ಮೊರಿಂಗಾದಲ್ಲಿರುವ ಪೋಷಕಾಂಶಗಳು ದೀರ್ಘಕಾಲದ ಆಯಾಸಕ್ಕೆ ಚಿಕಿತ್ಸೆ ನೀಡಬಲ್ಲ ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story