ಪಾರ್ಶ್ವವಾಯು

ಪಾರ್ಶ್ವವಾಯುವಿಗೆ ಬಹುಮುಖ್ಯ ಕಾರಣ ದೇಹದಲ್ಲಿನ ಈ ವಿಟಮಿನ್ ಕೊರತೆ

Chetana Devarmani
Jan 03,2024

ಪಾರ್ಶ್ವವಾಯು

ಬ್ರೈನ್ ಸ್ಟ್ರೋಕ್ ಅನ್ನು ಪಾರ್ಶ್ವವಾಯು ಎಂದೂ ಕರೆಯುತ್ತಾರೆ. ಈ ಸಮಸ್ಯೆಯು 50 ವರ್ಷಗಳ ನಂತರದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಪಾರ್ಶ್ವವಾಯು

ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್ ಅಪಾಯ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಹೆಚ್ಚು ಮುಖ್ಯವಾಗುತ್ತದೆ.

ಪಾರ್ಶ್ವವಾಯು

ದೇಹದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾದಾಗ ಪಾರ್ಶ್ವವಾಯು ಉಂಟಾಗುತ್ತದೆ.

ಪಾರ್ಶ್ವವಾಯು

ರಕ್ತದೊತ್ತಡ ಪಾರ್ಶ್ವವಾಯುವಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಹಾಗಾಗಿ, ಚಳಿಗಾಲದಲ್ಲಿ ಅಧಿಕ ಬಿಪಿ ಸಮಸ್ಯೆಯ ಬಗ್ಗೆ ವಿಶೇಷ ಗಮನ ಕೊಡಿ.

ಪಾರ್ಶ್ವವಾಯು

ಮೊದಲನೆಯದಾಗಿ ರೋಗಿಗೆ ಯಾವುದೇ ಕಾಯಿಲೆಯಿಲ್ಲದೆ ತೀವ್ರ ತಲೆನೋವು ಇರುತ್ತದೆ. ಈ ಹಠಾತ್ ನೋವನ್ನು ಗಂಭೀರ ಚಿಹ್ನೆ ಎಂದು ಪರಿಗಣಿಸಬೇಕು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಪಾರ್ಶ್ವವಾಯು

ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಕಷ್ಟ ಎನಿಸುತ್ತದೆ. ದೇಹದ ಕೆಲವು ಭಾಗಗಳಲ್ಲಿ ದೌರ್ಬಲ್ಯವಿರುತ್ತದೆ.

ಪಾರ್ಶ್ವವಾಯು

ವ್ಯಕ್ತಿಯು ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಾನೆ ಮತ್ತು ನಡೆಯಲು ಮತ್ತು ಕುಳಿತುಕೊಳ್ಳಲು ಕಷ್ಟವಾಗುತ್ತದೆ. ದೃಷ್ಟಿ ಕಳೆದುಕೊಳ್ಳಬಹುದು.

ಪಾರ್ಶ್ವವಾಯು

ಈ ಸಮಸ್ಯೆಯನ್ನು ತಪ್ಪಿಸಲು ನೀವು ನಿಮ್ಮ ಜೀವನಶೈಲಿಯನ್ನು ಸರಿಪಡಿಸಿಕೊಳ್ಳಬೇಕು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಸ್ಯಾಚುರೇಟೆಡ್ ಕೊಬ್ಬು, ಉಪ್ಪು, ಟ್ರಾನ್ಸ್ ಕೊಬ್ಬು ಮತ್ತು ಅಧಿಕ ಕೊಲೆಸ್ಟ್ರಾಲ್ ಅನ್ನು ತಪ್ಪಿಸಿ, ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.

ಪಾರ್ಶ್ವವಾಯು

ವ್ಯಾಯಾಮ ಮತ್ತು ಯೋಗವನ್ನು ನಿಮ್ಮ ಜೀವನಶೈಲಿಯಲ್ಲಿ ಸೇರಿಸಬೇಕಾಗುತ್ತದೆ. ಮದ್ಯಪಾನ ಮತ್ತು ತಂಬಾಕು ಸೇವನೆಯಿಂದ ದೂರವಿರಿ, ಒತ್ತಡ ಮುಕ್ತ ಜೀವನ ನಡೆಸಿ ಆರೋಗ್ಯವಂತರಾಗಿರಿ.

VIEW ALL

Read Next Story