ಮನೆಯೊಳಗೆ ಬರುವ ಶತಪದಿಗಳನ್ನು ತೊಡೆದು ಹಾಕಲು ತ್ವರಿತ ಮತ್ತು ಸುಲಭ ಟಿಪ್ಸ್

ಶತಪದಿಗಳು

ಶತಪದಿಗಳು ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಕಂಡುಬರುವ ಕೀಟ. ಕೆಲವರು ಇದನ್ನು ನೋಡಿದರೆ ಭಯಪಟ್ಟು ಓಡಿಹೋಗುತ್ತಾರೆ. ಇನ್ನೂ ಕೆಲವರು ಅಸಹ್ಯ ಪಡುತ್ತಾರೆ. ಹೀಗಿರುವಾಗ, ಇವುಗಳು ಮನೆಗೆ ಬಾರದಂತೆ ತಡೆಯಲು ಕೆಲವೊಂದು ಟಿಪ್ಸ್’ಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.

ವಿಷಕಾರಿ ಜೀವಿ

ಶತಪದಿ, ಸಾವಿರಕಾಲು ಇವೆಲ್ಲವೂ ಮನೆಯ ಸುತ್ತಮುತ್ತ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ತೊಡೆದು ಹಾಕಲು ಇಲ್ಲಿವೆ ಟಿಪ್ಸ್. ಅಂದಹಾಗೆ ಶತಪದಿಗಳು ಒಂದು ವಿಷಕಾರಿ ಜೀವಿ. ಇದು ಕಚ್ಚಿದರೆ ಗಂಭೀರ ಸಮಸ್ಯೆಗಳನ್ನು ಉಂಟು ಮಾಡಬಹುದು.

ಉಪ್ಪು-ವಿನೆಗರ್

ಶತಪದಿಗಳಿಗೆ ಉಪ್ಪು ಇಷ್ಟವಾಗುವುದಿಲ್ಲ. ಹೀಗಾಗಿ ವಿನೆಗರ್ ಜೊತೆ ಉಪ್ಪನ್ನು ಬೆರೆಸಿ ಸ್ಪ್ರೇ ಮಾಡಿದರೆ ಅವುಗಳನ್ನು ಶಾಶ್ವತವಾಗಿ ದೂರವಿಡಬಹುದು.

ಪುದೀನಾ ಎಣ್ಣೆ

ಪುದೀನಾ ಎಣ್ಣೆಯನ್ನು ಸಹ ಬಳಕೆ ಮಾಡಬಹುದು. ಪುದೀನಾ ಸಾಮಾನ್ಯವಾಗಿ ಗಾಢ ವಾಸನೆಯನ್ನು ಹೊಂದಿರುತ್ತದೆ. ಇದೇ ಕಾರಣದಿಂದ ಪುದೀನಾ ಎಣ್ಣೆ ಸ್ಪ್ರೇ ಮಾಡಿದ ತಕ್ಷಣ ಜರಿ, ಶತಪದಿಗಳು ದೂರ ಓಡಿಹೋಗುತ್ತವೆ.

ಡೆಟಾಲ್

ಡೆಟಾಲ್ ನೀರನ್ನು ಸಹ ಶತಪದಿಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸ್ಥಳದಲ್ಲಿ ಸ್ಪ್ರೇ ಮಾಡಿದರೆ, ಅವುಗಳು ಮತ್ತೆಂದೂ ಬರುವುದಿಲ್ಲ.

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆ ಅಥವಾ ಸಸ್ಯವನ್ನು ಸಹ ಪರಿಹಾರವಾಗಿ ಬಳಕೆ ಮಾಡಬಹುದು. ಶತಪದಿಗಳು ಕಟುವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಹೀಗಿರುವಾಗ ಮನೆಯ ಮೂಲೆಗಳಲ್ಲಿ ಈ ಎಣ್ಣೆಯನ್ನು ಸಿಂಪಡಿಸಬಹುದು.

ಲವಂಗದ ಎಣ್ಣೆ

ಲವಂಗದ ಎಣ್ಣೆ ಗಾಢ ಪರಿಮಳವನ್ನು ಬೀರುತ್ತದೆ. ಆದರೆ ಇದು ಕೀಟಗಳಿಗೆ ಇಷ್ಟವಾಗುವುದಿಲ್ಲ. ಈ ಎಣ್ಣೆಯನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ಸ್ಪ್ರೇ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು.

ಸೂಚನೆ

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story