ತಲೆನೋವಿನ ಸಮಸ್ಯೆಗೆ ಕ್ಷಣಾರ್ಧದಲ್ಲಿ ಪರಿಹಾರಕ್ಕಾಗಿ ಇಲ್ಲಿವೆ ಸಿಂಪಲ್ ಮನೆಮದ್ದು

Yashaswini V
Jul 15,2024

ತಲೆನೋವು

ತಲೆನೋವಿಗೆ ಹಲವು ಕಾರಣಗಳಿರಬಹುದು. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ನೈಸರ್ಗಿಕವಾಗಿ ತಲೆನೋವಿಗೆ ಪರಿಹಾರ ಪಡೆಯಬಹುದು. ಅಂತಹ ಮನೆಮದ್ದುಗಳೆಂದರೆ...

ನೀರು

ನಿರ್ಜಲೀಕರಣದಿಂದಲೂ ತಲೆನೋವು ಬಾಧಿಸುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ. ದೇಹವನ್ನು ಹೈಡ್ರೇಟ್ ಆಗಿರಿಸಿ.

ಶುಂಠಿ ಟೀ

ಶುಂಠಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯಿರಿ. ಇದರಿಂದ ಮೈಗ್ರೇನ್ ನಂತಹ ತಲೆನೋವಿಗೆ ಶೀಘ್ರವೇ ಪರಿಹಾರ ಪಡೆಯಬಹುದು.

ಪುದೀನಾ ಎಣ್ಣೆ

ಹಣೆಯ ಎರಡೂ ಬದಿಗಳಲ್ಲಿ ಹಾಗೂ ಕಿವಿಯ ಹಿಂದೆ ಸ್ವಲ್ಪ ಪುದೀನಾ ಎಣ್ಣೆಯನ್ನು ಅನ್ವಯಿಸುವುದರಿಂದ ತಲೆನೋವಿನಿಂದ ಶೀಘ್ರದಲ್ಲೇ ಪರಿಹಾರ ಪಡೆಯಬಹುದು.

ಕಾಫಿ

ಒಂದು ಕಪ್ ಕಾಫಿ ಸೇವನೆಯು ತಲೆನೋವನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ.

ಹರ್ಬಲ್ ಟೀ

ನಿಮಗಿಷ್ಟವಾಗುವ ಗಿಡಮೂಲಿಕೆಗಳ ಚಹಾ ತಯಾರಿಸಿ ಕುಡಿಯುವುದರಿಂದಲೂ ತಲೆನೋವಿನಿಂದ ಶೀಘ್ರವೇ ಪರಿಹಾರ ಪಡೆಯಬಹುದು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story