ದೃಷ್ಟಿ ಸುಧಾರಣೆಗಾಗಿ ಈ ಆಹಾರಗಳನ್ನು ಸೇವಿಸಿ, ಕನ್ನಡಕಕ್ಕೆ ಹೇಳಿ ಗುಡ್ ಬೈ!

Yashaswini V
Oct 24,2024

ದೃಷ್ಟಿಗಾಗಿ ಆಹಾರ

ದೈನಂದಿನ ಸಮತೋಲಿತ ಆಹಾರ ಸೇವನೆಯು ಕಣ್ಣುಗಳ ಆರೋಗ್ಯಕ್ಕೆ ಬಹಳ ಅಗತ್ಯ. ದೃಷ್ಟಿ ಸುಧಾರಣೆಗೆ ಯಾವ ಆಹಾರಗಳನ್ನು ತಿನ್ನಬೇಕು ಎಂದು ತಿಳಿಯೋಣ...

ಸಿಟ್ರಸ್ ಹಣ್ಣುಗಳು

ವಿಟಮಿನ್ ಸಿ ಹೆಚ್ಚಿಊರ್ವ ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದರಿಂದ ಕಣ್ಣಿನ ಪೊರೆ ಬಾರದಂತೆ ನೋಡಿಕೊಳ್ಳಬಹುದು.

ಸಾಲ್ಮನ್ ಫಿಶ್

ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಸಮೃದ್ಧವಾಗಿದೆ. ಇದು ಕಣ್ಣಿನ ಉರಿಯೂತ, ಕಣ್ಣು ಡ್ರೈ ಆಗುವುದನ್ನು ತಪ್ಪಿಸುತ್ತದೆ.

ಕ್ಯಾರೆಟ್

ಒಂದು ವಿಧದ ವಿಟಮಿನ್ ಎ ಆದ ಬೀಟಾ-ಕ್ಯಾರೋಟಿನ್ ಕ್ಯಾರೆಟ್ ನಲ್ಲಿ ಸಮೃದ್ಧವಾಗಿದ್ದು ಇದು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ತುಂಬಾ ಸಹಾಯಕವಾಗಿದೆ.

ಹಸಿರು ಸೊಪ್ಪು

ಪಾಲಕ್ ಸೇರಿದಂತೆ ತಾಜಾ ಹಸಿರು ಸೊಪ್ಪುಗಳನ್ನು ದೈನಂದಿನ ಆಹಾರದ ಭಾಗವಾಗಿಸುವುದರಿಂದ ಇವು ಕಣ್ಣುಗಳನ್ನು ಹಾನಿಕಾರಕ ಬೆಳಕಿನಿಂದ ರಕ್ಷಿಸುತ್ತದೆ.

ಬಾದಾಮಿ

ವಿಟಮಿನ್ ಇ ಹೇರಳವಾಗಿರುವ ಬಾದಾಮಿ ಕಣ್ಣುಗಳನ್ನು ಸ್ವತಂತ್ರ ರಾಡಿಕಲ್ ಗಳಿಂದ ಉಂಟಾಗುವ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಯಿಂದ ರಕ್ಷಿಸುತ್ತದೆ.

ದೊಡ್ಡ ಮೆಣಸಿನ ಕಾಯಿ

ಕೆಂಪು, ಹಸಿರು, ಹಳದಿ ಬಣ್ಣದ ದೊಡ್ಡ ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕವು ಹೇರಳವಾಗಿದ್ದು ಇವು ಕಣ್ಣುಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.

ಮೊಟ್ಟೆ

ಮೊಟ್ಟೆಯ ಹಳದಿ ಲೋಳೆಯಲ್ಲಿ ಲುಟೀನ್, ಜಿಯಾಕ್ಸಾಂಥಿನ್ ಉತ್ತಮ ಪ್ರಮಾಣದಲ್ಲಿದ್ದು, ಇದರ ಸೇವನೆಯು ಕಣ್ಣಿನ ಪೊರೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story