ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಮೊಸರು ಪೌಷ್ಟಿಕ ಆಹಾರವಾಗಿದೆ.
ಪ್ರೊ ಬಯೊಟಿಕ್ ಆಹಾರವಾಗಿರುವ ಮೊಸರಿನಲ್ಲಿ ಕ್ಯಾಲ್ಸಿಯಂ ಕೂಡ ಹೆಚ್ಚಾಗಿದೆ.
ಶಾಸ್ತ್ರಗಳ ಪ್ರಕಾರ, ಹೊರಹೋಗುವಾಗ ಮೊಸರು ತಿಂದು ಹೋಗುವುದರಿಂದ ಹೋದ ಕೆಲಸದಲ್ಲಿ ಜಯ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಇದು ಆರೋಗ್ಯಕ್ಕೂ ವರದಾನವಾಗಿದೆ.
ಮೊಸರಿನ ಸೇವನೆಯಿಂದ ದೇಹಕ್ಕೆ ಶಕ್ತಿ ಹೆಚ್ಚಾಗುತ್ತದೆ.
ನಿಯಮಿತವಾಗಿ ಮೊಸರಿನ ಸೇವನೆಯು ದೇಹವನ್ನು ಹೈಡ್ರೇಟ್ ಆಗಿರಿಸುವುದರ ಜೊತೆಗೆ ಆಯಾಸವನ್ನು ನಿವಾರಿಸುತ್ತದೆ.
ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾವಿದ್ದು ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
ಮೊಸರಿನ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ನಿತ್ಯ ಮೊಸರು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಉಳಿಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.