Avocado Juice: ಆವಕಾಡೊ ಜ್ಯೂಸ್ ಸೇವಿಸಿದರೆ ಆರೋಗ್ಯಕ್ಕಿದೆ ಹಲವು ಪ್ರಯೋಜನ
ಆವಕಾಡೊ ಅಥವಾ ಬಟರ್‌ಫ್ರೂಟ್ ಎಂದೂ ಕರೆಯಲ್ಪಡುವ ಈ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಕೆಲವು ಆರೋಗ್ಯ ಪ್ರಯೋಜನಗಳಿವೆ.
ಆವಕಾಡೊ ಜ್ಯೂಸ್‌ನ್ನು ನಿಯಮಿತವಾಗಿ ಸೇವಿಸುವುದರಿಂದ ಕಣ್ಣುಗಳು ಆರೋಗ್ಯಕರವಾಗಿರುತ್ತವೆ ಎಂದು ಹೇಳಲಾಗುತ್ತದೆ.
ಕಣ್ಣಿನ ಪೊರೆ ಮತ್ತು ಸ್ನಾಯುಕ್ಷಯದ ಅಪಾಯಗಳು ಕಡಿಮೆಯಾಗುತ್ತವೆ.
ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳುವುದು ಯಾವಾಗಲೂ ಸುಲಭ. ಆವಕಾಡೊ ಜ್ಯೂಸ್ ತೂಕ ಇಳಿಸಲು ಸಹಕಾರಿ.
ಆವಕಾಡೊ ರಸವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎಂದು ಅಧ್ಯಯನಗಳು ತೋರಿಸುತ್ತವೆ.
ಇದು ಒಲೀಕ್ ಆಮ್ಲವನ್ನು ಹೊಂದಿರುತ್ತದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುವ ಉತ್ತಮ ಕೊಬ್ಬು.
ಆವಕಾಡೊ ಜ್ಯೂಸ್ ಕುಡಿಯುವವರಿಗೆ ಹೃದಯ ಸಂಬಂಧಿ ಅಸ್ವಸ್ಥತೆಗಳು ಬರುವ ಸಾಧ್ಯತೆ ಕಡಿಮೆ.
ಪೊಟ್ಯಾಶಿಯಂ ಹೇರಳವಾಗಿರುವುದರಿಂದ ರಕ್ತದೊತ್ತಡದ ಮಟ್ಟವೂ ನಿಯಂತ್ರಣದಲ್ಲಿದೆ.
ಆವಕಾಡೊ ಟೈಪ್-2 ಮಧುಮೇಹವನ್ನು ಗುಣಪಡಿಸುತ್ತದೆ. ಇದು ಟೈಪ್ -2 ಮಧುಮೇಹಕ್ಕೆ ಅತ್ಯುತ್ತಮ ಔಷಧವಾಗಿದೆ. ಯಾವುದಕ್ಕೂ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.