ನೆಗ್ಗಿಲ ಮುಳ್ಳು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಲಾಭವನ್ನು ಪಡೆಯಬಹುದು.
ನೆಗ್ಗಿಲು ಮುಳ್ಳಿನ 5 ಗ್ರಾಂ ಚೂರ್ಣವನ್ನು 1 ಚಮಚ ಜೇನು ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿದ್ರೆ ಕಿಡ್ನಿ ಸ್ಟೋನ್ ಸುಲಭವಾಗಿ ಕರಗುತ್ತದೆ.
ಉರಿ ಮೂತ್ರ ನಿವಾರಿಸಲು ನೆಗ್ಗಿಲು ಮುಳ್ಳಿನ ಬಳ್ಳಿಯನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಕಲ್ಲು ಸಕ್ಕರೆ ಅಥವಾ ಜೇನು ಬೆರೆಸಿ 20-30MLನಷ್ಟು ದಿನಕ್ಕೆ 3 ಬಾರಿ ಸೇವಿಸಬೇಕು.
ಮೈ-ಕೈ ನೋವು ಹಾಗೂ ಸಂಧಿವಾತ ನೋವಿಗೆ ಒಣಗಿದ ಇಡೀ ಬಳ್ಳಿಯನ್ನು ಸಮಭಾಗ ಒಣ ಶುಂಠಿ ಸೇರಿಸಿ ಚೂರ್ಣ ಮಾಡಿ ಕಷಾಯ ತಯಾರಿಸಿ ರಾತ್ರಿ ಮಲಗುವಾಗ ಕುಡಿಯಬಹುದು.
ಪುರುಷತ್ವ ವೃದ್ಧಿಗೆ ನೆಗ್ಗಿಲು ಮುಳ್ಳು ಹಾಗೂ ಶತಾವರಿ ಬೇರು ತಲಾ 10 ಗ್ರಾಂ ಚೂರ್ಣವನ್ನು 1 ಗ್ಲಾಸ್ ಹಾಲಿನಲ್ಲಿ ಕುದಿಸಿ ದಿನಕ್ಕೆ 2 ಬಾರಿ ಸೇವಿಸಬೇಕು.
ಚರ್ಮ ರೋಗಕ್ಕೆ ನೆಗ್ಗಿಲು ಮುಳ್ಳಿನ ಹಸಿ ಬಳ್ಳಿಯನ್ನು ಅರೆದು ಲೇಪಿಸಬಹುದು.
ನೆಗ್ಗಿಲು ಮುಳ್ಳಿನ ಹೂವುಗಳನ್ನು ಅರೆದು ಮಜ್ಜಿಗೆಯಲ್ಲಿ ಬೆರೆಸಿ ಅತಿಸಾರದಲ್ಲಿ ಬಳಸಬಹುದಾಗಿದೆ.
ಅನೇಕ ಕಾಯಿಲೆಗಳಲ್ಲಿ ನೆಗ್ಗಿಲು ಮುಳ್ಳು ಪವರ್ಫುಲ್ ಮನೆಮದ್ದಾಗಿ ಕೆಲಸ ಮಾಡುತ್ತದೆ.