ನಿಯಮಿತವಾಗಿ ಕರ್ಜೂರ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ.
ಕರ್ಜೂರದಲ್ಲಿ ಕಬ್ಬಿಣ, ಖನಿಜಾಂಶ, ಕ್ಯಾಲ್ಸಿಯಂ, ಅಮೈನೊ ಆಸಿಡ್, ರಂಜಕ ಹಾಗೂ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿದೆ.
ಕರ್ಜೂರವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
ಮಲಬದ್ಧತೆ ಸಮಸ್ಯೆಯುಳ್ಳವರು ಅವಶ್ಯವಾಗಿ ಕರ್ಜೂರ ಸೇವನೆ ಮಾಡಬೇಕು.
ಕರ್ಜೂರದಲ್ಲಿರುವ ಕಬ್ಬಿಣಾಂಶವು ರಕ್ತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಕರ್ಜೂರದಲ್ಲಿರುವ ವಿಟಮಿನ್ ‘ಬಿ’ ಕೂದಲಿಗೆ ಒಳ್ಳೆಯದು. ಇದರಿಂದ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಫ್ರಕ್ಟೋಸ್, ಸುಕ್ರೋಸ್ ಮತ್ತು ಗ್ಲೂಕೋಸ್ ಹೇರಳವಾಗಿರುವ ಕರ್ಜೂರವನ್ನು ದಿನಕ್ಕೆ 2-4 ಸೇವನೆ ಮಾಡಿದ್ರೆ ದೇಹಕ್ಕೆ ಶಕ್ತಿ ಸಿಗುತ್ತದೆ.
ಕಡಿಮೆ ತೂಕವುಳ್ಳವರು ಕರ್ಜೂರ ಸೇವಿಸಬೇಕು. ಇದರಲ್ಲಿರುವ ವಿಟಮಿನ್, ಸಕ್ಕರೆ ಅಂಶ, ಜೀವಸತ್ವಗಳು ತೂಕ ಏರಿಕೆಗೆ ಸಹಕಾರಿ.