ಸಬ್ಬಸಿಗೆ ಸೊಪ್ಪು ಸೇವನೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಸಬ್ಬಸಿಗೆ ಸೊಪ್ಪಿನಲ್ಲಿ ಹೇರಳ ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವಗಳನ್ನು ಒಳಗೊಂಡಿದೆ.
ಸಬ್ಬಸಿಗೆ ಸೊಪ್ಪಿನ ಬಳಕೆಯಿಂದ ಮಲಬದ್ಧತೆ, ಗ್ಯಾಸ್ಟ್ರಿಕ್, ಮಾಯದ ಗಾಯ, ರೋಗ ನಿರೋಧಕತೆ ಎಲ್ಲಕ್ಕೂ ಪರಿಹಾರ ಸಿಗುತ್ತದೆ.
ಬಾಣಂತಿಯರಲ್ಲಿ ಹಾಲಿನ ಕೊರತೆ ಕಾಡಿದರೆ ನಿಯಮಿತವಾಗಿ ಸಬ್ಬಸಿಗೆ ಸೊಪ್ಪನ್ನು ಸೇವಿಸಿದ್ರೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ಸಬ್ಬಸಿಗೆ ಸೊಪ್ಪನ್ನು ಅರೆದು ಸಾಸಿವೆ ಎಣ್ಣೆಯೊಂದಿಗೆ ಕುಸಿದಿ ಲೇಪಿಸಿದರೆ ಕೀಲುನೋವು ವಾಸಿಯಾಗುತ್ತದೆ.
ಸಬ್ಬಸಿಗೆ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ನಿದ್ರಾಹೀನತೆ ದೂರವಾಗುತ್ತದೆ.
ಸಬ್ಬಸಿಗೆ ಸೊಪ್ಪನ್ನು ಅರೆದು ಅರಿಶಿನದೊಂದಿಗೆ ಬೆರೆಸಿ ಲೇಪಿಸುವುದರಿಂದ ಗಾಯ ವಾಸಿಯಾಗುತ್ತದೆ.
ಸಬ್ಬಸಿಗೆ ಸೊಪ್ಪು ಸೇವನೆಯಿಂದ ನರ ದೌರ್ಬಲ್ಯ ಮತ್ತು ಅಜೀರ್ಣ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.