ಪ್ರತಿದಿನ ಬೆಳಗ್ಗೆ ಎದ್ದತಕ್ಷಣ ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾ ಸೇವಿಸಿದ್ರೆ ಹಲವಾರು ಪ್ರಯೋಜನಗಳಿವೆ.
ಮಳೆಗಾಲದಲ್ಲಿ ಕಾಡುವ ಸೋಂಕು ಸಂಬಂಧಿತ ಶೀತ ಜ್ವರಕ್ಕೆ ಶುಂಠಿ ಚಹಾ ಅತ್ಯುತ್ತಮ ಮನೆಮದ್ದಾಗಿದೆ.
ಶುಂಠಿ ಚಹಾ ಸೇವನೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಶುಂಠಿ ಚಯಾ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ.
ನಿಯಮಿತವಾಗಿ ಶುಂಠಿ ಚಹಾ ಸೇವಿಸುವುದನ್ನು ರೂಢಿಸಿಕೊಂಡರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ಶುಂಠಿ ಜೊತೆಗೆ ನಿಂಬೆ, ದಾಲ್ಚಿನ್ನಿ, ಲವಂಗ, ಚಕ್ಕೆ ಹಾಕಿಯೂ ನೀವು ಚಹಾ ಮಾಡಬಹುದು.
ಶುಂಠಿ ಚಹಾ ಜೀರ್ಣಕ್ರಿಯೆ, ಉರಿಯೂತ & ಶೀತದ ಲಕ್ಷಣ ನಿವಾರಿಸಲು ಸಹಕಾರಿ.
ಶುಂಠಿ ಚಹಾ ಸೇವಿಸುವವರು ಸಕ್ಕರೆ ಬದಲು ಜೇನುತುಪ್ಪ ಬಳಸುವುದು ಉತ್ತಮ.