ತುಪ್ಪ ಸೇವನೆಯಿಂದ ಮಾನವನ ದೇಹಕ್ಕೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆಯಿಂದ ಹಲವು ಲಾಭಗಳಿವೆ.
ತುಪ್ಪವು ಪೌಷ್ಟಿಕಾಂಶದ ಶಕ್ತಿಯ ಮನೆಯಾಗಿದ್ದು, ಇದರಲ್ಲಿ ಒಮೆಗಾ 3 ಮತ್ತು ಒಮೆಗಾ 9ನಂತಹ ಅಗತ್ಯ ಕೊಬ್ಬಿನ ಆಮ್ಲಗಳು ಹೇರಳವಾಗಿದೆ.
ನಿಯಮಿತವಾಗಿ ತುಪ್ಪ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ತುಪ್ಪವು ಕೊಬ್ಬಿನಲ್ಲಿ ಕರಗುವ ವಿಟಮಿನ್ಗಳಾದ A,D,E ಮತ್ತು Kನ್ನು ಒಳಗೊಂಡಿರುತ್ತದೆ.
ಪ್ರತಿದಿನ ತುಪ್ಪ ಸೇವಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯಬಹುದು.
ತುಪ್ಪವನ್ನು ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.