ನಿಯಮಿತವಾಗಿ ದ್ರಾಕ್ಷಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಅನೇಕರು ನೆಚ್ಚಿನ ದ್ರಾಕ್ಷಿ ಹಣ್ಣು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಅದ್ಭುತ ಕೊಡುಗೆ ನೀಡುತ್ತದೆ.
ದ್ರಾಕ್ಷಿ ಹಣ್ಣು ಸೇವನೆಯಿಂದ ನೀವು ಅನೇಕ ರೋಗಗಳನ್ನು ದೂರವಿಡಬಹುದು.
ದ್ರಾಕ್ಷಿಯು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿ & ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ.
ದ್ರಾಕ್ಷಿಯಲ್ಲಿ ವಿಟಮಿನ್ C ಉತ್ತಮ ಪ್ರಮಾಣದಲ್ಲಿದ್ದು, ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ.
ದ್ರಾಕ್ಷಿಯಲ್ಲಿ ವಿಟಮಿನ್ A, ವಿಟಮಿನ್ C, ವಿಟಮಿನ್ B ಜೊತೆಗೆ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ.
ದ್ರಾಕ್ಷಿಯಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲೋರಿಗಳು, ಫೈಬರ್, ಗ್ಲೂಕೋಸ್, ಮೆಗ್ನೀಸಿಯಮ್ ಮತ್ತು ಸಿಟ್ರಿಕ್ ಆಮ್ಲದಂತಹ ಅನೇಕ ಪೋಷಕಾಂಶಗಳಿವೆ.
ಫ್ಲೇವನಾಯ್ಡ್ಗಳು ದ್ರಾಕ್ಷಿಯಲ್ಲಿ ಕಂಡುಬರುವ ಅತ್ಯಂತ ಶಕ್ತಿಯುತ ಉತ್ಕರ್ಷಣ ನಿರೋಧಕ ಅಂಶವಾಗಿದ್ದು, ಇದು ದೇಹಕ್ಕೆ ಪ್ರಯೋಜನಕಾರಿ