ಪೇರಳೆ ಅಥವಾ ಸೀಬೆ ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಪೇರಳೆಯಲ್ಲಿರುವ ವಿಟಮಿನ್ ‘ಸಿ’ ಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮಳೆಗಾಲದಲ್ಲಿ ಬರುವ ಶೀತ, ನೆಗಡಿ & ಕೆಮ್ಮು ದೂರಮಾಡುತ್ತದೆ. ವಿಟಮಿನ್ ‘C'ಗೆ ಕ್ಯಾನ್ಸರ್ ಕಾರಕಗಳನ್ನು ದೂರ ಮಾಡುವ ಶಕ್ತಿಯೂ ಇದೆ.
ಸೀಬೆ ಹಣ್ಣಿನ ಬೀಜದ ಸತ್ವವು ಥೈರಾಯಿಡ್ ಗ್ರಂಥಿಗೆ ಆರೋಗ್ಯಕಾರಿಯಾಗಿದೆ.
ಸೀಬೆಕಾಯಿಗೆ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಇದ್ದು,. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣ ಜೀರ್ಣಾಶಯವನ್ನು ಆರೋಗ್ಯದಿಂದಿಡುತ್ತದೆ.
ಪೇರಳೆಯನ್ನು ತಿನ್ನುವುದರಿಂದ ದೇಹದಲ್ಲಿ ಪೊಟಾಶಿಯಂ, ಸೋಡಿಯಂ ಸಮತೋಲನದಲ್ಲಿರುತ್ತದೆ. ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ತಗ್ಗುತ್ತದೆ.
ಸೀಬೆಯಲ್ಲಿನ ಆಂಟಿ ಆಕ್ಸಿಡೆಂಟ್ಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ಒಂದು ಸೀಬೆ ತಿಂದರೆ ಚರ್ಮವೂ ಆರೋಗ್ಯವಾಗಿರುತ್ತದೆ.
ಸೀಬೆ ಹಣ್ಣಿನಲ್ಲಿ ವಿಟಮಿನ್ ‘A’ ಹೆಚ್ಚಿರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.