ದೇಹದಲ್ಲಿ ನೀರಿನ ಪ್ರಮಾಣ

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ದೇಹವು ಹಲವಾರು ರೋಗಗಳಿಗೆ ತುತ್ತಾಗುತ್ತದೆ. ಪ್ರತಿದಿನ ಸರಿಯಾದ ಪ್ರಮಾಣದ ನೀರನ್ನು ಕುಡಿಯುವುದರಿಂದ ದೇಹದ ಚಯಾಪಚಯ ಸುಧಾರಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಾಕಷ್ಟು ನೀರು ಕುಡಿಯಬೇಕು

ದೇಹದ ಪ್ರಮುಖ ಅಂಗವಾದ ಮೂತ್ರಪಿಂಡಗಳ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವುದು ಬಹಳ ಅವಶ್ಯಕ. ನೀರಿನ ಸಹಾಯದಿಂದ ಮೂತ್ರಪಿಂಡದ ಕಾರ್ಯವು ಸುಧಾರಿಸುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾದ ವಿಷವನ್ನು ತೆಗೆದುಹಾಕಲಾಗುತ್ತದೆ.

ಕಿಡ್ನಿಯ ಆರೋಗ್ಯ

ಮೂತ್ರಪಿಂಡಗಳ ಕಾರ್ಯವನ್ನು ಸುಗಮವಾಗಿಡಲು ಮತ್ತು ಕಿಡ್ನಿಯನ್ನು ಆರೋಗ್ಯವಾಗಿಡಲು ನೀವು ಪ್ರತಿದಿನ ಎಷ್ಟು ನೀರು ಕುಡಿಯಬೇಕು ಎಂಬುದರ ಕುರಿತು ತಿಳಿದುಕೊಳ್ಳುವುದು ಮುಖ್ಯ.

2-4 ಲೀಟರ್‌ ನೀರು

ನಿರ್ದಿಷ್ಟ ವಯಸ್ಸಿನಿಂದಲೇ ಕನಿಷ್ಠ 2 ರಿಂದ 4 ಲೀಟರ್‌ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದು ನಿಮ್ಮ ಮೂತ್ರಪಿಂಡಗಳನ್ನು ರಕ್ಷಿಸುವುದಲ್ಲದೆ ಶಕ್ತಿ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

8-10 ಗ್ಲಾಸ್‌ ನೀರು

ನಿಮ್ಮ ಮೂತ್ರಪಿಂಡಗಳನ್ನು ರಕ್ಷಿಸಲು ನೀವು ದಿನಕ್ಕೆ ಕನಿಷ್ಠ 8-10 ಗ್ಲಾಸ್‌ ನೀರನ್ನು ಕುಡಿಯುವ ಅಭ್ಯಾಸವನ್ನು ಹೊಂದುವುದು ಅಗತ್ಯ.

ಕಡಿಮೆ ನೀರು ಕುಡಿಯಬೇಕು

ಕಿಡ್ನಿ ವೈಫಲ್ಯ ಇರುವವರು ಮತ್ತು ಕಿಡ್ನಿ ಡಯಾಲಿಸಿಸ್‌ ಮಾಡಿಸುವವರು ಕಡಿಮೆ ನೀರು ಕುಡಿಯಬೇಕು. ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಮೇಲೆ ಒತ್ತಡ ಉಂಟಾಗಿ ಸಮಸ್ಯೆ ಉಲ್ಭಣಿಸಬಹುದು.

ಕಿಡ್ನಿ ಸಮಸ್ಯೆಗಳು

ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಕಿಡ್ನಿ ಸಮಸ್ಯೆಗಳು ಶುರುವಾಗುತ್ತವೆ. ನಿಮಗೆ ಮೂತ್ರಪಿಂಡದ ಸಮಸ್ಯೆಗಳಿದ್ದರೆ ಎಷ್ಟು ಲೀಟರ್‌ ನೀರನ್ನು ಕುಡಿಯಬೇಕು? ಎಂದು ನಿರ್ಧರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ಅಗತ್ಯ ಸಲಹೆ ಪಡೆಯಬೇಕು.

ಉತ್ತಮ ಆರೋಗ್ಯ

ಕಡಿಮೆ ನೀರನ್ನು ಕುಡಿಯುವುದರಿಂದ ಮೂತ್ರನಾಳದ ಸೋಂಕು ಮತ್ತು ಮೂತ್ರಪಿಂಡ ವೈಫಲ್ಯ ಮುಂತಾದ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಎಲ್ಲಾ ರೀತಿಯಲ್ಲೂ ಉತ್ತಮ ಆರೋಗ್ಯವು ದೊರಕುತ್ತದೆ.

VIEW ALL

Read Next Story