ಹಲವಾರು ಪ್ರಯೋಜನಗಳು

ಹುಣಸೆ ಹಣ್ಣು ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ.

Puttaraj K Alur
Oct 20,2024

ಆಂಟಿ-ಆಕ್ಸಿಡೆಂಟ್

ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ, ಬಿ, ಪೊಟಾಸಿಯಂ, ಮೆಗ್ನೀಷಿಯಂ ಕಬ್ಬಿಣ & ಆಂಟಿ-ಆಕ್ಸಿಡೆಂಟ್ ಅಪಾರ ಪ್ರಮಾಣದಲ್ಲಿವೆ.

ಜೀರ್ಣಾಂಗ ವ್ಯವಸ್ಥೆ

ನಾರಿನಂಶ ಹೆಚ್ಚಾಗಿರುವ ಹುಣಸೆಹಣ್ಣು ಸೇವನೆಯಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ.

ಮಲಬದ್ಧತೆ ಸಮಸ್ಯೆ

ಹುಣಸೆಹಣ್ಣು ಕರುಳಿನ ಭಾಗದಲ್ಲಿ ಉತ್ತಮ ಚಲನೆಯನ್ನುಂಟು ಮಾಡುವುದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನ ದೂರ ಮಾಡುತ್ತದೆ.

ಕೊಲೆಸ್ಟ್ರಾಲ್

ಹುಣಸೆ ಹಣ್ಣು ಅಪಾರ ಆಂಟಿ-ಆಕ್ಸಿಡೆಂಟ್ ಗುಣ ಒಳಗೊಂಡಿದ್ದು, ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ.

ಹೃದಯದ ಕಾಯಿಲೆ

ನಿಯಮಿತವಾಗಿ ಹುಣಸೆ ಹಣ್ಣು ಸೇವನೆಯಿಂದ ಹೃದಯದ ಕಾಯಿಲೆಯಿಂದ ರಕ್ಷಣೆ ದೊರೆಯುತ್ತದೆ.

ಇನ್ಸುಲಿನ್ ಪ್ರತಿರೋಧತೆ

ನಮ್ಮ ದೇಹದಲ್ಲಿ ಇನ್ಸುಲಿನ್ ಪ್ರತಿರೋಧತೆ ಕಡಿಮೆ ಮಾಡುವ ಗುಣವನ್ನು ಹುಣಸೆಹಣ್ಣು ಹೊಂದಿದೆ ಎಂದು ಸಂಶೋಧನೆಗಳು ತಿಳಿಸಿವೆ.

ಬ್ಲಡ್ ಶುಗರ್ ಲೆವೆಲ್

ಹುಣಸೆಹಣ್ಣು ದೇಹದ ಗ್ಲುಕೋಸ್ ಬಳಕೆಯನ್ನು ಹೆಚ್ಚು ಮಾಡುವುದಲ್ಲದೆ ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತದೆ.

VIEW ALL

Read Next Story