ನ್ಯುಮೋನಿಯಾ ಎಂಬುದು ಒಂದು ಶ್ವಾಸಕೋಶದ ಮೇಲೆ ನೇರವಾಗಿ ಪರಿಣಾಮ ಬೀರುವ ಸೋಂಕು.
ನ್ಯೂಮೋನಿಯಾ ಹೆಚ್ಚಾಗಿ ಮಕ್ಕಳು, ವೃದ್ಧರು ಮತ್ತು ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಜನರಲ್ಲಿ ಕಂಡುಬರುತ್ತದೆ.
ಈ ನ್ಯೂಮೋನಿಯಾ ಕಾಯಿಲೆ ಬಗ್ಗೆ ಹೆಚ್ಚು ಅರಿವು ಮತ್ತು ಕಾಳಜಿ ವಹಿಸುವುದು ಮುಖ್ಯವಾಗಿದೆ.
ಚಳಿಗಾಲದಲ್ಲಿ ಕಂಡುಬರುವ ಶೀತ ಮತ್ತು ಕೆಮ್ಮು ನ್ಯುಮೋನಿಯಾದ ಲಕ್ಷಣಗಳಾಗಿರಬಹುದು.
ನ್ಯುಮೋನಿಯಾ ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.
ನ್ಯುಮೋನಿಯಾದ ಆರಂಭಿಕ ರೋಗಲಕ್ಷಣಗಳಲ್ಲಿ ಜ್ವರ ಕೂಡ ಒಂದು.
ಹಸಿವು ಆಗದಿರುವುದು ಮತ್ತು ಆಯಾಸವಾಗುವುದ ಸಹ ಈ ಕಾಯಿಲೆಯಿ ಲಕ್ಷಣವಾಗಿದೆ.
ಈ ರೀತಿಯ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು.