ಬದಲಾಗುತ್ತಿರುವ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ.
ಆರೋಗ್ಯಕರ ಅಭ್ಯಾಸ ಮತ್ತು ಆಹಾರಗಳಿಂದ ಮಾತ್ರ ರೋಗಗಳು ದೂರವಿರಬಹುದು.
ಆರೋಗ್ಯಕರ ಜೀವನ ಕಾಪಾಡಿಕೊಳ್ಳಲು ಮೊದಲನೆಯದಾಗಿ ಆಹಾರ ಕ್ರಮಕ್ಕೆ ವಿಶೇಷ ಗಮನ ನೀಡಬೇಕು.
ಇದರಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯದಿಂದ ದೂರವಿರಬಹುದು.
ಕೆಲವು ಮನೆಮದ್ದು ಮತ್ತು ಸುಲಭ ಪರಿಹಾರ ಅಳವಡಿಸಿಕೊಳ್ಳುವ ಮೂಲಕ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಹೃದ್ರೋಗದ ಅಪಾಯವನ್ನು ಕೂಡ ಕೊತ್ತಂಬರಿ ಸೊಪ್ಪು ಕಡಿಮೆ ಮಾಡಬಲ್ಲದು.
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ಕೊತ್ತಂಬರಿ ಸೊಪ್ಪನ್ನು ತಪ್ಪದೇ ಸೇವಿಸಿ. ಕೊತ್ತಂಬರಿ ಸೊಪ್ಪು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ಕೊತ್ತಂಬರಿ ಸೊಪ್ಪು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ.