ಝುಕಿನಿ ಇದು ಕುಂಬಳಕಾಯಿಯಂತೆ ಕಾಣಿಸುತ್ತದೆ. ಇದು ಫೈಬರ್ ಮತ್ತು ಪೋಷಕಾಂಶಗಳಲ್ಲಿ ಸಮೃದ್ದವಾಗಿದೆ. ಇದು ಹಸಿರು ಮತ್ತು ಹಳದಿ ಬಣ್ಣದಲ್ಲಿರುತ್ತದೆ.
ಇದು ತ್ವಚೆಯನ್ನು ಯುವ ಅವಸ್ಥೆಯಲ್ಲಿಯೇ ಇಡುತ್ತದೆ. ಕಲೆಗಳು ಸುಕ್ಕುಗಳು ಚರ್ಮದ ಮೇಲೆ ಮೂಡದಂತೆ ತಡೆಯುತ್ತದೆ.
ಇದು ಕಣ್ಣಿನ ಸಮಸ್ಯೆ ಬಾರದಂತೆ ತಡೆಯುತ್ತದೆ. ಕಣ್ಣಿನ ಶುಷ್ಕತೆಗೆ ಪರಿಹಾರ ನೀಡುತ್ತದೆ.
ಇದು ಫೈಬರ್ ನ ಸಮೃದ್ದ ಆಗರವಾಗಿದೆ. ಇದನ್ನೂ ತಿನ್ನುವುದರಿಂದ ಟೈಪ್ 2 ಡಯಾಬಿಟೀಸ್ ಬಾರದಂತೆ ತಡೆಯಬಹುದು.
ಇದರಲ್ಲಿ ಪೊಟಾಷಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದನ್ನು ತಿನ್ನುವುದರಿಂದ ರಕ್ತನಾಳಗಳು ಸ್ವಚ್ಚವಾಗಿರುತ್ತದೆ. ಬಿಪಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿ ಇಡುತ್ತದೆ. ಗ್ಯಾಸ್, ಅಜೀರ್ಣ, ಹುಳಿ ತೇಗು ಮುಂತಾದ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತದೆ.
ಇದರಲ್ಲಿಇರುವ ಆಂಟಿ ಆಕ್ಸಿಡೆಂಟ್ ಗಳು ಮತ್ತು ಮೆಗ್ನೆಶಿಯಂನಂಥಹ ಅಂಶಗಳು ಮೂಳೆಗಳನ್ನು ಬಲವಾಗಿ ಇಡಲು ಸಹಾಯ ಮಾಡುತ್ತದೆ.
ಇದು ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನೀವು ಕೂಡಾ ಈ ತರಕಾರಿಯನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಈ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಿ.