ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆಯನ್ನು ಪ್ರತಿಯೊಬ್ಬರೂ ಎದುರಿಸುತ್ತಿದ್ದಾರೆ. ಆದರೆ ಮನೆ ಮದ್ದಿನ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು.
ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸಲು ಕೂದಲಿಗೆ ಎಣ್ಣೆಯನ್ನು ಹಚ್ಚುವುದು ಬಹಳ ಮುಖ್ಯ.
-ದಾಸವಾಳದ ಹೂವು - ತೆಂಗಿನೆಣ್ಣೆ
ಮೊದಲು ದಾಸವಾಳದ ಹೂವನ್ನು ತೊಳೆದು ಒಣಗಿಸಿ. ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
ಹೀಗೆ ಮಾಡಿಟ್ಟುಕೊಂಡ ಪೇಸ್ಟ್ ಅನ್ನು 4-5 ಚಮಚ ತೆಂಗಿನೆಣ್ಣೆಯ ಜೊತೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಎಣ್ಣೆಯನ್ನು ಲೋ ಫ್ಲೇಮ್ ನಲ್ಲಿ ಬಿಸಿ ಮಾಡಿ. ನಂತರ ಗ್ಯಾಸ್ ಬಂದ್ ಮಾಡಿ ಎಣ್ಣೆಯನ್ನು ತಣ್ಣಗಾಗಲು ಬಿಡಿ.
ತಯಾರಿಸಿಕೊಂಡ ಎಣ್ಣೆಯನ್ನು ಕೂದಲಿಗೆ ಹಚ್ಚಿ ೩೦ ನಿಮಿಷಗಳವರೆಗೆ ಬಿಡಿ. ನಂತರ ಕೂದಲಿಗೆ ಶಾಂಪೂ ಮಾಡಿ.
ವಾರಕ್ಕೆ ಎರಡು ಬಾರಿ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಈ ಮೂಲಕ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.