ಬಾಯಿ ಹುಣ್ಣಿಗೆ ಚಿಟಿಕೆಯಲ್ಲಿ ಪರಿಹಾರ ನೀಡುತ್ತವೆ ಈ ಮನೆಮದ್ದುಗಳು: ಒಮ್ಮೆ ಟ್ರೈ ಮಾಡಿ

Bhavishya Shetty
Sep 09,2024

ಬಾಯಿ ಹುಣ್ಣು

ಎಲ್ಲಾ ವಯೋಮಾನದವರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ ಬಾಯಿ ಹುಣ್ಣು. ಇದರಿಂದ ತಿನ್ನಲು ಮತ್ತು ಕುಡಿಯಲು ಕೂಡ ಕಷ್ಟವಾಗುತ್ತದೆ. ಅಷ್ಟಕ್ಕೂ ಈ ಗುಳ್ಳೆಗಳು ಬರಲು ಪ್ರಮುಖ ಕಾರಣವೆಂದರೆ ಕಳಪೆ ಹೊಟ್ಟೆಯ ಆರೋಗ್ಯ ಅಥವಾ ಕಡಿಮೆ ನೀರು ಕುಡಿಯುವುದು.

ಮನೆಮದ್ದು

ನಾವು ನಿಮಗೆ ಕೆಲವು ಸುಲಭವಾದ ಮನೆಮದ್ದುಗಳನ್ನು ಹೇಳುತ್ತೇವೆ. ಅದು ನಿಮಗೆ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಬಾಯಿಗುಳ್ಳೆಗಳ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಹರಳೆಣ್ಣೆ

ಬಾಯಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡಾಗ, ಒಂದು ಲೋಟ ನೀರಿನಲ್ಲಿ 1 ಚಮಚ ಹರಳೆಣ್ಣೆಯನ್ನು ಬೆರೆಸಿ ದಿನದಲ್ಲಿ ಎರಡರಿಂದ ಮೂರು ಬಾರಿ ತೊಳೆಯಿರಿ.

ಅರಿಶಿನ

ಅರಿಶಿನ ನೀರು ಬಾಯಿ ಹುಣ್ಣುಗಳಿಂದ ಪರಿಹಾರವನ್ನು ನೀಡುತ್ತದೆ. ನೀವು ಮಾಡಬೇಕಾಗಿರುವುದು ಒಂದು ಲೋಟ ನೀರಿಗೆ 2 ಚಮಚ ಅರಿಶಿನವನ್ನು ಸೇರಿಸಿ, ಅದನ್ನು ಕುದಿಸಿ, ನಂತರ ತಣ್ಣಗಾಗಿಸಿ. ಅದರೊಂದಿಗೆ ಗಾರ್ಗ್ಲ್ ಮಾಡಿ. ಇದು ತಕ್ಷಣವೇ ಪರಿಣಾಮ ಬೀರುತ್ತದೆ.

ಲೈಕೋರೈಸ್

ಲೈಕೋರೈಸ್ ಅಥವಾ ಅತಿಮಧುರವನ್ನು ರುಬ್ಬಿ, ಜೇನುತುಪ್ಪದಲ್ಲಿ ಬೆರೆಸಿ ಗುಳ್ಳೆಗಳಿರುವ ಜಾಗದಲ್ಲಿ ಇರಿಸಿ. ಸ್ವಲ್ಪ ಸಮಯದ ನಂತರ ಪರಿಹಾರವನ್ನು ಪಡೆಯುತ್ತೀರಿ.

ಟೀ ಟ್ರೀ ಆಯಿಲ್‌

ಟೀ ಟ್ರೀ ಆಯಿಲ್‌ ಅನ್ನು ಹತ್ತಿಯ ಮೂಲಕ ಗುಳ್ಳೆ ಇರುವ ಜಾಗಕ್ಕೆ ಹಚ್ಚಿ. ನಂತರ 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಅದಾದ ನಂತರ ಬಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಏಲಕ್ಕಿ

ಹಸಿರು ಏಲಕ್ಕಿಯನ್ನು ಪುಡಿಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಗುಳ್ಳೆಗಳಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ, ಶುದ್ಧ ನೀರಿನಿಂದ ಬಾಯಿಯನ್ನು ಸ್ವಚ್ಛಗೊಳಿಸಿ.

ಅಲೋವೆರಾ

ಇದಲ್ಲದೇ ಅಲೋವೆರಾ ರಸವನ್ನು ಗುಳ್ಳೆಗಳಿರುವ ಜಾಗಕ್ಕೆ ಹಚ್ಚಬಹುದು. ಇದರಿಂದ ತಕ್ಷಣದ ಪರಿಹಾರವೂ ದೊರೆಯುತ್ತದೆ.

ತುಪ್ಪ

ದೇಸಿ ತುಪ್ಪವು ಹುಣ್ಣುಗಳಿಂದ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಇದನ್ನು ಗುಳ್ಳೆಗಳಿರುವ ಜಾಗಕ್ಕೆ ಹಚ್ಚಿ ರಾತ್ರಿ ಮಲಗಬೇಕು. ಬೆಳಿಗ್ಗೆ ನಿಮಗೆ ನೋವಿನಿಂದ ಪರಿಹಾರ ಸಿಗುತ್ತದೆ.

ಸೂಚನ

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.

VIEW ALL

Read Next Story