ಮಳೆಗಾಲ ಬಂತೆಂದರೆ ಸಾಕು ಹುಳ ಹುಪ್ಪಟೆಗಳು ಮನೆಯೊಳಗೆ ಸೇರಿಕೊಳ್ಳಲು ಯತ್ನಿಸುತ್ತವೆ. ಇವುಗಳಿಂದಾಗಿ ಜೀವನ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿ ಬಂದೊದಗುತ್ತದೆ.
ಇದರಲ್ಲಿ ಗಾಳಿಯಲ್ಲಿ ಹಾರುವ ಕೀಟಗಳಲ್ಲದೆ ನೆಲದ ಮೇಲೆ ಹರಿದಾಡುವ ಜೀವಿಗಳೂ ತೊಂದರೆ ನೀಡಲು ಪ್ರಾರಂಭಿಸುತ್ತದೆ. ಆದರೆ ಇಂದು ನಾವು ಇದಕ್ಕೆ ಪರಿಹಾರವನ್ನು ನೀಡಲಿದ್ದೇವೆ.
ಮಾನ್ಸೂನ್ ಸೀಸನ್ ನಲ್ಲಿ ತೊಂದರೆ ಕೊಡುವ ಕೀಟಗಳನ್ನು ತೆಗೆದುಹಾಕಲು ಕೆಲ ಟಿಪ್ಸ್ ಗಳನ್ನು ನಿಮಗೆ ಹೇಳಲಿದ್ದೇವೆ.
ಆಯುರ್ವೇದದ ತಜ್ಞರ ಪ್ರಕಾರ, ಮಾನ್ಸೂನ್ ಸೀಸನ್ ನಲ್ಲಿ ಕೀಟಗಳನ್ನು ತೆಗೆದುಹಾಕಲು ಬೇವಿನ ಎಣ್ಣೆ ಬೆಸ್ಟ್. ಮೊದಲು ಮನೆಯಲ್ಲಿರುವ ಗಿಡಗಳನ್ನು ಸ್ವಚ್ಛಗೊಳಿಸಿ. ನಂತರ ಬೇವಿನ ಎಣ್ಣೆಯನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಕೀಟಗಳು ಓಡಿ ಹೋಗುತ್ತವೆ.
ರಾತ್ರಿ ದೀಪ ಹಚ್ಚಿದಾಗ ಕೆಲ ಕೀಟಗಳು ಅವುಗಳನ್ನು ಧಾವಿಸುತ್ತವೆ. ಈ ಸಂದರ್ಭದಲ್ಲಿ ಬಾಗಿಲು ಮತ್ತು ಕಿಟಕಿಗಳ ಮೇಲೆ ಕಪ್ಪು ಪರದೆಗಳನ್ನು ಹಾಕಬಹುದು. ಹೀಗೆ ಮಾಡುವುದರಿಂದ ಮನೆಯ ಬೆಳಕು ಹೊರಗೆ ಕಾಣಿಸುವುದಿಲ್ಲ ಮತ್ತು ಕೀಟಗಳು ಒಳಗೆ ಬರಲು ಪ್ರಯತ್ನಿಸುವುದಿಲ್ಲ.
ಕರಿಮೆಣಸನ್ನು ಕೂಡ ಬಳಕೆ ಮಾಡಬಹುದು. ಕರಿಮೆಣಸನ್ನು ರುಬ್ಬಿಕೊಂಡು ನೀರಿನಲ್ಲಿ ಕಲಸಿ. ಅದನ್ನು ಬಾಟಲಿಯಲ್ಲಿ ತುಂಬಿಸಿ ಮತ್ತು ಕೀಟಗಳು ಅಡಗಿರುವ ಸ್ಥಳಗಳ ಮೇಲೆ ಸಿಂಪಡಿಸಿ.
ಮಳೆಗಾಲದಲ್ಲಿ ಹೊರಬರುವ ಕೀಟಗಳನ್ನು ತೊಡೆದುಹಾಕಲು ನಿಂಬೆ ಮತ್ತು ಅಡಿಗೆ ಸೋಡಾದ ಪರಿಹಾರವನ್ನು ಮಾಡಬಹುದು. ಇದಕ್ಕಾಗಿ ಈ ಎರಡರ ದ್ರಾವಣವನ್ನು ಬಾಟಲಿಯಲ್ಲಿ ತುಂಬಿಸಿ. ಗಿಡಗಳು ಮತ್ತು ಮನೆಯ ಮೂಲೆಗಳಲ್ಲಿ ಸಿಂಪಡಿಸಿ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)