ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಬಾದಾಮಿಗಳನ್ನು ಸೂಪರ್ಫುಡ್ ಎಂದು ಪರಿಗಣಿಸಲಾಗುತ್ತದೆ. ಸ್ನಾಯು ಶಕ್ತಿ ಹೆಚ್ಚಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತವೆ.
ಇನ್ನು ಬಾದಾಮಿ ಎಣ್ಣೆಯು ಕೂದಲಿಗೆ ಪ್ರಯೋಜನವನ್ನು ನೀಡುತ್ತದೆ. ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿರುವ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ, ಅಕಾಲಿಕವಾಗಿ ಬಿಳಿಯಾಗುವುದು, ಅತಿಯಾದ ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಬಾದಾಮಿ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಕೂದಲಿಗೆ ಸಾಕಷ್ಟು ಪೋಷಣೆ ಸಿಗುತ್ತದೆ. ಇದು ಕೂದಲಿಬ ಗುಣಮಟ್ಟ ಸುಧಾರಿಸುತ್ತದೆ.
ಕೂದಲ ಕಿರುಚೀಲಗಳು ಮತ್ತು ಬೇರುಗಳನ್ನು ಹೈಡ್ರೇಟ್ ಮಾಡುತ್ತದೆ. ಈ ಎಣ್ಣೆಯನ್ನು ಹಚ್ಚುವುದರಿಂದ ನೆತ್ತಿಯು ತೇವಾಂಶದಿಂದ ಕೂಡಿರುತ್ತದೆ. ಇದರಿಂದ ವೇಗವಾಗಿ ಕೂದಲು ಬೆಳೆಯುತ್ತದೆ.
ಅನಾರೋಗ್ಯಕರ ಜೀವನಶೈಲಿಯಿಂದಾಗಿ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತವೆ. ಆದ್ದರಿಂದ ಬಾದಾಮಿ ಎಣ್ಣೆಯನ್ನು ತಲೆಗೆ ಹಚ್ಚಿದರೆ ಇದು ಬಿಳಿಕೂದಲಿಗೆ ತಕ್ಷಣ ಪರಿಹಾರ ನೀಡುತ್ತದೆ