ಬೇಸಿಗೆಯಲ್ಲಿ ಮಾವು ಹೇರಳವಾಗಿ ಸಿಗುತ್ತದೆ. ಆದರೆ ಇದನ್ನು ಸ್ಟೋರ್ ಮಾಡುವ ಸರಿಯಾದ ವಿಧಾನ ತಿಳಿದಿದೆಯೇ?
ಒಮ್ಮೆಲೇ ಬಹಳಷ್ಟು ಮಾವಿನಹಣ್ಣು ತಂದಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡಲು ಗೊತ್ತಿಲ್ಲದಿದ್ದರೆ ಎಲ್ಲವೂ ಹಾಳಾಗಿ ಬಿಡುತ್ತದೆ.
ಬೇಸಿಗೆ ವಿಪರೀತವಾಗಿರುವುದರಿಂದ ಮಾವಿನಹಣ್ಣು ಕೂಡಾ ಬೇಗನೆ ಹಾಳಾಗುತ್ತದೆ.
ಹಾಗಿದ್ದರೆ ಮಾವು ಕೆಡದಂತೆ ಸಂರಕ್ಷಿಸುವ ವಿಧಾನ ಯಾವುದು ನೋಡೋಣ.
ಮಾವಿನ ಹಣ್ಣನ್ನು ಪೇಪರ್ ನಲ್ಲಿ ಸುತ್ತಿ ಫ್ರಿಜ್ ನಲ್ಲಿ ಇಡಬೇಕು.
ಮಾವಿನ ಹಣ್ಣನ್ನು ಫ್ರಿಜ್ ನಲ್ಲಿ ಇಡುವಾಗ ಟೆಂಪರೇಚರ್ ಅನ್ನು ಸರಿಯಾಗಿ ಸೆಟ್ ಮಾಡಬೇಕು. ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು.
ಮಾವಿನ ಕಾಯಿ ಆಗಿದ್ದರೆ ಅದನ್ನು ಪೇಪರ್ ನಲ್ಲಿ ಸುತ್ತಿ ಕತ್ತಲು ಜಾಗದಲ್ಲಿ ಇಡಿ.
ಆಗಾಗ ಈ ಮಾವನ್ನು ಚೆಕ್ ಮಾಡುತ್ತಾ ಇರಬೇಕು.ಒಂದು ವೇಳೆ ಮಾವು ಹಣ್ಣಾಯಿತು ಎಂದಾದರೆ ಫ್ರಿಜ್ ನಲ್ಲಿ ಇಡಬೇಕು.
ಮಾವು ತುಂಬಾ ಹಣ್ಣಾಗಿದ್ದರೆ ಅದನ್ನು ಕಟ್ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
ಈ ರೀತಿ ಡೀಪ್ ಫ್ರೀಜ್ ನಲ್ಲಿಟ್ಟು ಫ್ರೋಜನ್ ಹಣ್ಣಿನ ರೀತಿ ತಿನ್ನಬಹುದು.